ಶಿರೂರು ಮಠಾಧೀಶರ ನಿಧನಕ್ಕೆ ಯಡಿಯೂರಪ್ಪ ಸಂತಾಪ

19-07-2018, ಬೆಂಗಳೂರು:
ಉಡುಪಿಯ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರು ಶ್ರೀಗಳವರ ನಿಧನದ ಸುದ್ದಿ ಆಘಾತಗೊಂಡೆ. ಕಿರಿಯ ವಯಸ್ಸಿನಲ್ಲೇ ಆಧ್ಯಾತ್ಮಿಕ ಸಾಧನೆ ಮಾಡಿ ಸಾಮಾಜಿಕ ಕಾರ್ಯದಲ್ಲಿ ಸಕ್ರಿಯರಾಗಿದ್ದ ಶೀಗಳದು ಬಹುಮುಖ ಪ್ರತಿಭೆ.

ಅವರ ಅಕಾಲಿಕ ನಿಧನದಿಂದ ಇಡೀ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಭಕ್ತ ಸಮೂಹಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಯಡಿಯೂರಪ್ಪನವರು ಸಂತಾಪ ಸೂಚಿಸಿದ್ದಾರೆ.