ಇಂದು ಮಾನ್ಯ ಯಡಿಯೂರಪ್ಪನವರು ಮೈಸೂರಿನ ಸುತ್ತೂರು ಮಠದ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ 1059ನೇ ಜಯಂತಿ ಮಹೋತ್ಸವದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಿವರಾತ್ರಿ ದೇಶಿಕೇಂದ್ರ ಶ್ರೀಗಳ ಆಶೀರ್ವಾದ ಪಡೆದರು. ಈ ವೇಳೆ ಮಾತನಾಡಿ, ಸುತ್ತೂರು ಮಠ ಧರ್ಮ-ಜ್ಞಾನಗಳ ಸಂಗಮ ಕೇಂದ್ರವಾಗಿದೆ. ಮಠ ಲಕ್ಷಾಂತರ ಜನರಿಗೆ ಜ್ಞಾನದಾನ ನೀಡುತ್ತಿದೆ. ಮುಂದೆಯೂ ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದು, ಜನರು ಇದಕ್ಕೆ ಸಹಕರಿಸಬೇಕು ಎಂದು ತಿಳಿಸಿದರು . ಹಲವು ಶ್ರೀಗಳು, ನಾಯಕರು, ನಾನಾ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.

ಸುತ್ತೂರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ 1059ನೇ ಜಯಂತಿ ಮಹೋತ್ಸವ
- Post author:admin
- Post published:January 24, 2019
- Post category:BSY's Photos
- Post comments:0 Comments