ಸ್ಟಾರ್ಟ್ಅಪ್ ಸಮಾವೇಶ ಯಶಸ್ವಿ

ಸ್ಟಾರ್ಟ್ಅಪ್ ಸಮಾವೇಶ ಯಶಸ್ವಿ

ಸೆ.6, ಬೆಂಗಳೂರು: ಬೆಂಗಳೂರಿನಲ್ಲಿ ‘ಭಾರತ್ ನೀತಿ’ ಸಂಸ್ಥೆಯು ಜೈನ್ ಗ್ರೂಪ್‌ನ ಸಹಯೋಗದೊಂದಿಗೆ ಆಯೋಜಿಸಿದ್ದ ಸ್ಟಾರ್ಟ್ಅಪ್ ಸಮಾವೇಶವು ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಶ್ರೀ ಬಿ.ಎಸ್.ಯಡಿಯೂರಪ್ಪನವರು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಿಗಳು ಕ್ರಿಯಾಶೀಲರಾದಷ್ಟೂ ಕೆಳಹಂತದಲ್ಲಿ ಆರ್ಥಿಕ ಚಟುವಟಿಕೆಗಳು ಹೆಚ್ಚುತ್ತವೆ. ಆದ್ದರಿಂದ ಪ್ರಧಾನಿ ನರೇಂದ್ರ ಮೋದಿಯವರು ನೂತನ ಹಾಗೂ ಯುವ ಉದ್ಯಮಿಗಳನ್ನು ಉತ್ತೇಜಿಸುವ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡುತ್ತಿದ್ದಾರೆ. ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸಂಬಂಧಿಸಿದ ನೀತಿಗಳಲ್ಲಿ ಸ್ವಾಗತಾರ್ಹ ಬದಲಾವಣೆ ತರುವುದರಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ.

ಕೇಂದ್ರ ಸರ್ಕಾರದ ಅತ್ಯಂತ ಯಶಸ್ವಿ ಯೋಜನೆಗಳಲ್ಲಿ ಒಂದಾದ ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಸಣ್ಣ ಉದ್ಯಮಗಳಿಗೆ 10 ಲಕ್ಷ ರೂಪಾಯಿವರೆಗೆ ಸಾಲ ನೀಡಲಾಗುತ್ತಿದೆ. ಈವರೆಗೆ ಒಟ್ಟು 13.63 ಕೋಟಿ ಜನರಿಗೆ ಈ ಯೋಜನೆಯಲ್ಲಿ ಸಾಲ ವಿತರಿಸಲಾಗಿದ್ದು, ಅವುಗಳ ಒಟ್ಟು ಮೊತ್ತ 6.44 ಲಕ್ಷ ಕೋಟಿ ರೂಪಾಯಿ. ಈ ಯೋಜನೆಯಿಂದ ಲಕ್ಷಾಂತರ ಯುವಕರು ಉದ್ಯಮಿಗಳಾಗಿ ಹೊರಹೊಮ್ಮಿದ್ದಾರೆ. ಅವರು ತಮ್ಮ ಉದ್ಯಮಗಳಲ್ಲಿ ಹಲವು ಯುವಕರಿಗೆ ಉದ್ಯೋಗ ನೀಡುತ್ತಿದ್ದಾರೆ. ಈ ಮೂಲಕ ದೇಶದಲ್ಲಿ ಸದ್ದಿಲ್ಲದೇ ಕ್ರಾಂತಿಯಾಗುತ್ತಿದೆ. ದುರ್ದೈವವೆಂದರೆ ಅನೇಕ ಆರ್ಥಿಕ ತಜ್ಞರು ಇದನ್ನು ಅರ್ಥಮಾಡಿಕೊಳ್ಳುತ್ತಿಲ್ಲ ಎಂದರು.

Leave a Reply