ಸೆಲ್ಫಿ ಸಮಯ

ಪರಿವರ್ತನಾ ಯಾತ್ರೆಗೆ ಇಂದು ರಜೆಯಿತ್ತು. ಮಂಗಳೂರಿಗೆ ತೆರಳಿ ಅಲ್ಲಿ ಪಕ್ಷದ ರಾಜ್ಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಿ, ಪತ್ರಿಕಾಗೋಷ್ಠಿ ಮುಗಿಸಿ, ಪುತ್ತೂರಿಗೆ ಮರಳಿದೆ. ರಾತ್ರಿ ಪುತ್ತೂರು ನಗರದಲ್ಲಿ ವಾಕಿಂಗ್ ಗೆ ತೆರಳಿದ್ದೆ.

ನನಗೆ ಅಚ್ಚರಿ ಮೂಡಿಸುವಂತೆ ರಸ್ತೆಯಲ್ಲಿ ಹೋಗುತ್ತಿದ್ದ ಸಾಕಷ್ಟು ಜನ ವಾಹನ ನಿಲ್ಲಿಸಿ, ನನ್ನೊಂದಿಗೆ ಸೆಲ್ಫಿ ತೆಗೆದುಕೊಂಡರು. ಅದರಲ್ಲಿ ಐದಾರು ಮುಸ್ಲಿಂ ಕುಟುಂಬಗಳೂ ಇದ್ದವು. ಅವರೆಲ್ಲರಿಗೂ ನನ್ನೊಂದಿಗೆ ಫೋಟೊ ತೆಗೆಸಿಕೊಂಡಿದ್ದು ಖುಷಿ ಕೊಟ್ಟಿತು. ಫೋಟೊ ತೆಗೆಸಿಕೊಳ್ಳುವ ಅವರ ಉತ್ಸಾಹ ನೋಡಿ ನಾನೂ ಖುಷಿಯಿಂದಲೇ ಫೋಟೊ ತೆಗೆಸಿಕೊಂಡೆ.

ಹಾಗೆ ಸುತ್ತಾಡಿ, ಅಲ್ಲೇ ಕಂಡ ಅಂಗಡಿಗೆ ಹೊಕ್ಕು ಸೋಡಾ ಕುಡಿದೆ. ಅಂಗಡಿ ಮಾಲಿಕ ನನ್ನ ಪರಿಚಯ ಹಿಡಿದು ಪ್ರೀತಿಯಿಂದ ಮಾತನಾಡಿಸಿದ. ಆತನಿಗೆ ಎಷ್ಟು ಅಭಿಮಾನವೆಂದರೆ ಕೊನೆಗೆ ದುಡ್ಡನ್ನೂ ಪಡೆಯಲಿಲ್ಲ.

ಒಂದು ವಾಕಿಂಗ್ ಹೋಗಿದ್ದರಿಂದ ಜನ ನನ್ನ ಮೇಲೆ ಎಷ್ಟೊಂದು, ಪ್ರೀತಿ ಅಭಿಮಾನ ಇಟ್ಟಿದ್ದಾರೆ ಎಂಬುದು ಗೊತ್ತಾಯಿತು. ಬಹುಶಃ ಜನರ ಈ ಪ್ರೀತಿ, ಅಭಿಮಾನದ ಋಣವನ್ನು ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲವೇನೊ.