ಸಿದ್ದಗಂಗಾ ಮಠದಲ್ಲಿ ಗದ್ದುಗೆ ಪೂಜೆ ನೆರವೇರಿಸಿದ ಪ್ರಧಾನಿ

ಸಿದ್ದಗಂಗಾ ಮಠದಲ್ಲಿ ಗದ್ದುಗೆ ಪೂಜೆ ನೆರವೇರಿಸಿದ ಪ್ರಧಾನಿ

2 ಜನವರಿ 2020
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಸಿದ್ದಗಂಗಾ ಮಠದಲ್ಲಿ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ಪೂಜೆ ನೆರವೇರಿಸಿದರು.ನಂತರ ಅವರು, ಮಠಕ್ಕೆ ತಾವು ನೀಡಿದ ಭೇಟಿಯ ಸ್ಮರಣಾರ್ಥ ಬಿಲ್ವಪತ್ರೆ ಗಿಡ ನೆಟ್ಟು ನೀರೆರೆದರು. ನಂತರ ಲಿಂಗೈಕ್ಯ ಶಿವಕುಮಾರ ಶ್ರೀಗಳ ವಸ್ತು ಸಂಗ್ರಹಾಲಯದ ಶಂಕುಸ್ಥಾಪನೆ ನೆರವೇರಿಸಿದರು.ಜನವರಿ 21ರಂದು ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಯವರ ಪುಣ್ಯಾರಾಧನೆ ಇದ್ದು, ಅದಕ್ಕೆ ಪ್ರಧಾನಿಯವರನ್ನು ಆಹ್ವಾನಿಸಲಾಗಿತ್ತು. ಅಂದು ಗಣರಾಜ್ಯೋತ್ಸವ ಸಮೀಪ ಇರುವ ಕಾರಣ ನರೇಂದ್ರ ಮೋದಿಯವರು ಮುಂಚಿತವಾಗಿಯೇ ಮಠಕ್ಕೆ ಆಗಮಿಸಿ ಸ್ವಾಮೀಜಿಯವರ ಗದ್ದುಗೆ ಪೂಜೆ ನೆರವೇರಿಸಿದ್ದಾರೆ.
ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ, ಕೇಂದ್ರ ರಾಸಾಯನಿಕ ‌ಮತ್ತು ರಸಗೊಬ್ಬರ ಖಾತೆ ಸಚಿವರಾದ ಡಿ ವಿ ಸದಾನಂದ ಗೌಡ, ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಖಾತೆ ಸಚಿವ ಪ್ರಹ್ಲಾದ್ ಜ್ಯೋಷಿ, ರೈಲ್ವೆ ಖಾತೆ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಸರ್ಕಾರದ ಕಾನೂನು, ಸಂಸದೀಯ ವ್ಯವಹಾರಗ, ಸಣ್ಣ ನೀರಾವರಿ ಸಚಿವರಾದ ಜೆ ಸಿ ಮಾಧುಸ್ವಾಮಿ, ವಸತಿ ಹಾಗೂ ತೋಟಗಾರಿಕೆ ಸಚಿವರಾದ ವಿ ಸೋಮಣ್ಣ, ಸಿದ್ದಗಂಗಾ ‌ಮಠದ ಸಿದ್ಧಲಿಂಗ ಸ್ವಾಮೀಜಿ ಹಾಜರಿದ್ದರು.

Leave a Reply