Press Note on BBMP Election Win

Press Note on BBMP Election Win

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಬಿಜೆಪಿ ಪಕ್ಷದ ಪರವಾಗಿ ಹೊರಬಿದ್ದಿದ್ದು ಶ್ರೀ ನರೇಂದ್ರ ಮೋದಿಯವರ ಅಲೆ ಇನ್ನೂ ಪ್ರಭಾವಶಾಲಿಯಾಗಿದೆ ಎಂದು ಈ ಚುನಾವಣೆ ಸಾಭೀತುಪಡಿಸಿದೆ. ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ಜನಪರ ಯೋಜನೆಗಳಿಗೆ ಬೆಂಗಳೂರು ಜನತೆ ಸ್ಪಂದಿಸಿ ಭಾರತೀಯ ಜನತಾ ಪಕ್ಷದ ಪರವಾಗಿ ಮತ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಕಳೆದ 2 ವರ್ಷ 3 ತಿಂಗಳುಗಳ ಕಾಲ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಭಿವೃದ್ಧಿಯನ್ನು ನಿರ್ಲಕ್ಷಿಸಿದ, ರಾಜ್ಯದಲ್ಲಿ ನಡೆಯುತ್ತಿರುವ ಸರಣಿ ರೈತರ ಆತ್ಮಹತ್ಯೆ ಹಾಗೂ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ದುರಾಢಳಿತಕ್ಕೆ ಬೇಸತ್ತು ಈ ಸರ್ಕಾರದ ಸೊಕ್ಕನ್ನು ಅಡಗಿಸಿದ್ದಾರೆ.

ಬೆಂಗಳೂರು ಜನತೆಯ ಭಾವನೆಗೆ ವಿರುದ್ಧವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಭಜನೆ ಮಾಡಲು ಹೊರಟ ಮತ್ತು ವಿಭಜನೆಯ ನೆಪದಲ್ಲಿ ಬಿಬಿಎಂಪಿ ಚುನಾವಣೆಯನ್ನು ಮುಂದೂಡಲು ಪದೇ ಪದೇ ಪ್ರಯತ್ನ ನಡೆಸಿದ ಆಳುವ ಕಾಂಗ್ರೆಸ್ ಸರ್ಕಾರಕ್ಕೆ ಜನತೆ ಫಲಿತಾಂಶದ ಮೂಲಕ ಸರಿಯಾದ ಉತ್ತರ ಹೇಳಿದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಬೃಹತ್ ಬೆಂಗಳೂರು ಅಭಿವೃದ್ಧಿಗೆ ನೀಡಿದ ಅನುದಾನ ಹಾಗೂ ಕಳೆದ 5 ವರ್ಷಗಳ ಕಾಲ ಬಿಬಿಎಂಪಿಯಲ್ಲಿ ಜನಪರ ಆಡಳಿತ ನಡೆಸಿದ ಬಿಜೆಪಿ ಪಕ್ಷಕ್ಕೆ ಜನ ಮನ್ನಣೆ ನೀಡಿದ್ದು, ಪ್ರಗತಿಯ ವೇಗವನ್ನು ಹೆಚ್ಚಿಸಲು ಪಕ್ಷ ಮುಂದಿನ ದಿನಗಳಲ್ಲಿ ಇನ್ನಷ್ಟು ಕ್ರಮಕೈಗೊಳ್ಳಲಿದೆ. ಬಿಜೆಪಿಯನ್ನು ಬೆಂಬಲಿಸಿದ ಬೆಂಗಳೂರಿನ ಎಲ್ಲಾ ಮತದಾರರಿಗೂ ಹಾಗೂ ಗೆಲುವಿಗೆ ಶ್ರಮಿಸಿದ ಪಕ್ಷದ ನಿಷ್ಟಾವಂತ ಕಾರ್ಯಕರ್ತರು, ಪಕ್ಷದ ಮುಖಂಡರಿಗೆ ನನ್ನ ಅಭಿನಂದನೆಗಳು.

Microsoft Word - letter head

Leave a Reply