ಪ್ರೀತಿ- ಪುಣ್ಯ ಎರಡನ್ನೂ ಸಂಪಾದಿಸುವ ಭಾಗ್ಯ

ಪ್ರೀತಿ- ಪುಣ್ಯ ಎರಡನ್ನೂ ಸಂಪಾದಿಸುವ ಭಾಗ್ಯ

  • Post author:
  • Post category:Blog
  • Post comments:0 Comments

ಈ ಪ್ರವಾಸ ನಿಜಕ್ಕೂ ನನ್ನ ಪಾಲಿಗೆ ವರ. ಈ ಇಳಿ ವಯಸ್ಸಿನಲ್ಲಿ ರಾಜ್ಯಾದ್ಯಂತ ಪರಿವರ್ತನಾ ಯಾತ್ರೆಯಲ್ಲಿ ಸಂಚರಿಸುವಾಗ ನನಗೆ ಜನ ನನ್ನ ಮೇಲೆ ಎಷ್ಟು ಪ್ರೀತಿ ಅಭಿಮಾನ ಇಟ್ಟಿದ್ದಾರೆ ಎಂಬುದನ್ನು ಅತ್ಯಂತ ಸಮೀಪದಿಂದ ಅರಿಯುವ ಅವಕಾಶ ದೊರೆತಿದೆ. ಯಾತ್ರೆಯಲ್ಲಿ ಸಾಗುತ್ತ ಹಿಂದೆಲ್ಲ ಮಾಡಿದ ಯಾತ್ರೆಗಳು, ನಡೆಸಿದ ಹೋರಾಟಗಳು ನೆನಪಾಗುತ್ತಿವೆ.

ನ.16ರಂದು ಖಾನಾಪುರದಲ್ಲಿ ಕಾರ್ಯಕ್ರಮ ಮುಗಿಸಿ ಬೈಲಹೊಂಗಲ ಶಾಸಕ ವಿಶ್ವನಾಥ ಗೌಡ ಪಾಟೀಲ್ ಅವರ ಮನೆಯಲ್ಲೇ ಉಳಿದುಕೊಂಡಿದ್ದೆ. ಮನೆಯಲ್ಲಿ ದೊರೆಯುವ ಪ್ರೀತ್ಯಾದರ ಬೆರೆತ ಆತಿಥ್ಯ ಯಾವ ಸ್ಟಾರ್ ಹೋಟೆಲ್‍ನಲ್ಲೂ ಸಿಗುವುದಿಲ್ಲ ನೋಡಿ. ನ.17ರಂದು ಬೆಳಗ್ಗೆ ಅವರ ಮನೆಯಲ್ಲೇ ಉಪಾಹಾರ ಸೇವಿಸಿ, ಬೈಲಹೊಂಗಲ, ಕಿತ್ತೂರು ಹಾಗೂ ಸವದತ್ತಿಯಲ್ಲಿ ಯಾತ್ರೆಯ ಸಾರ್ವಜನಿಕ ಸಭೆಗಳನ್ನು ನಡೆಸಿ, ಸವದತ್ತಿಯಲ್ಲೇ ಉಳಿದುಕೊಂಡೆ.

ನ.18ರಂದು ಬೆಳಗ್ಗೆ ಎದ್ದು ಸವದತ್ತಿ ಯಲ್ಲಮ್ಮನ ದರ್ಶನ ಮಾಡಿ, ಪೂಜೆ ಸಲ್ಲಿಸಿ, ಹೊರಟೆ. ಇಂದು ರಾಮದುರ್ಗ, ಅರಬಾವಿ ಹಾಗೂ ಗೋಕಾಕಗಳಲ್ಲಿ ಸಾರ್ವಜನಿಕ ಸಭೆ ನಡೆಸಿದೆ.

ನೋಡಿ ಈ ಯಾತ್ರೆಯ ವೈಶಿಷ್ಟ್ಯವೇ ಅದು. ಹೊರಟಾಗಿನಿಂದ ಅದೆಷ್ಟು ಕ್ಷೇತ್ರಗಳಾದವು. ಅವುಗಳ ಜತೆಗೆ ಪುಣ್ಯಕ್ಷೇತ್ರಗಳಿಗೂ ಭೇಟಿ ನೀಡಿದೆ. ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಉಡುಪಿ, ಮುರುಡೇಶ್ವರ ಈಗ ಸವದತ್ತಿ ಯಲ್ಲಮ್ಮ. ಯಾತ್ರೆ ಮುಗಿಯುವಷ್ಟರಲ್ಲಿ ರಾಜ್ಯದ ಎಲ್ಲ ಕ್ಷೇತ್ರಗಳ ಜತೆಗೆ ಪುಣ್ಯಕ್ಷೇತ್ರಗಳ ದರ್ಶನವೂ ಆಗಿರುತ್ತದೆ. ಜನರ ಪ್ರೀತಿ, ದೇವರ ಆಶೀರ್ವಾದ ಎರಡನ್ನೂ ಏಕಕಾಲಕ್ಕೆ ಪಡೆಯುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ.

 

 

Leave a Reply