ಜನರ ಆಶೀರ್ವಾದಕ್ಕೆ ಋಣಿ, ಅಭಿವೃದ್ಧಿ ಕಾರ್ಯಕ್ಕೆ ಬಲ

ಇತ್ತೀಚೆಗೆ ನಡೆದ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನಗಳನ್ನು ತಂದುಕೊಟ್ಟ ಜನರ ಆಶೀರ್ವಾದಕ್ಕೆ ನಾನು ಋಣಿಯಾಗಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು. ಈ ವಿಜಯಕ್ಕೆ ಕಾರಣರಾದ ನಮ್ಮ ರಾಜ್ಯದ ಜನತೆಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಅವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.

ಟಿವಿ ಮೂಲಕ ಫಲಿತಾಂಶ ವೀಕ್ಷಿಸುತ್ತಿರುವ ಸಿಎಂ
ಟಿವಿ ಮೂಲಕ ಫಲಿತಾಂಶ ವೀಕ್ಷಿಸುತ್ತಿರುವ ಸಿಎಂ

ಈ ಫಲಿತಾಂಶದ ಮೂಲಕ, ಈ ಸರಕಾರ ಜನಪರ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಎಂಬ ನಮ್ಮ ಮಾತನ್ನು ಜನ ಒಪ್ಪಿದ್ದಾರೆ.  ಸರಕಾರವನ್ನು ಟೀಕಿಸುತ್ತಿದ್ದ ಪ್ರತಿಪಕ್ಷಗಳಿಗೆ ಇದರಿಂದ ಮುಖಭಂಗವಾಗಿದೆ. ಬಿಜೆಪಿ ಸರಕಾರದ ವಿರುದ್ಧದ ಈ ಅಪಪ್ರಚಾರವನ್ನು ಜನರು ತಿರಸ್ಕರಿಸಿದ್ದಾರೆ. ಇನ್ನಾದರೂ ಈ ಟೀಕೆ, ಟಿಪ್ಪಣಿಗಳನ್ನು ನಿಲ್ಲಿಸಿ ನಮಗೆ ಸಹಕಾರ ನೀಡುವ ಮನಸ್ಸು ಮಾಡಬೇಕು. ಪ್ರತಿಪಕ್ಷದ ಟೀಕೆಗಳಿಗೆ ಗಮನ ನೀಡದೆ ಅಭಿವೃದ್ಧಿಯ ಹೆಜ್ಜೆಯನ್ನು ಮುಂದುವರಿಸುತ್ತೇನೆ ಎಂದು ಇಂದು ನಡೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.