ದಕ್ಷಿಣ ಕನ್ನಡದ ಕಾರ್ಯಕರ್ತರ ಅಭಿಮಾನ ಮರೆಯುವಂಥದ್ದಲ್ಲ

ದಕ್ಷಿಣ ಕನ್ನಡದ ಕಾರ್ಯಕರ್ತರ ಅಭಿಮಾನ ಮರೆಯುವಂಥದ್ದಲ್ಲ

  • Post author:
  • Post category:Blog
  • Post comments:0 Comments

ಮೂರು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿವರ್ತನಾ ಯಾತ್ರೆಯೊಂದಿಗೆ ಓಡಾಡುತ್ತಿದ್ದೇನೆ. ಇಂದು ಬಂಟ್ವಾಳ, ಮೂಡುಬಿದಿರೆ ಹಾಗೂ ಮಂಗಳೂರಿನಲ್ಲಿ ಕಾರ್ಯಕ್ರಮವಿತ್ತು. ಉಸ್ತುವಾರಿ ಸಚಿವ ರಮಾನಾಥ ರೈ ಕ್ಷೇತ್ರವಾದ ಬಂಟ್ವಾಳದಲ್ಲಿ ನಡೆದ ಮೆರವಣಿಗೆಯನ್ನು ನೀವು ನೋಡಬೇಕಿತ್ತು. ಅಷ್ಟು ಅದ್ಧೂರಿಯಾಗಿತ್ತು. ಕಾರ್ಯಕರ್ತರ ಸಂಖ್ಯೆಯೂ ಅಷ್ಟೇ ದೊಡ್ಡದಿತ್ತು. ಮೆರವಣಿಗೆಯಲ್ಲಿದ್ದ ಹುಲಿ ನೃತ್ಯ ಗಮನಸೆಳೆಯಿತು.

ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ಸಿನ ಜನಾರ್ದನ ಪೂಜಾರಿ ಅವರ ಸಮೀಪವರ್ತಿಯಾಗಿದ್ದ ಹರಿಕೃಷ್ಣ ಬಂಟ್ವಾಳ ಅವರು ಬಿಜೆಪಿ ಸೇರಿದರು. ಅವರು ಮಾತನಾಡುತ್ತ ಕಾಂಗ್ರೆಸ್ಸಿನ ನಿಜವಾದ ಸಮಸ್ಯೆ ಏನು ಎಂಬುದನ್ನು ವಿವರಿಸಿದರು. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನಾಯಕತ್ವ ಸಾಕಷ್ಟು ಜನರಲ್ಲಿ ಭ್ರಮನಿರಸನ ಮೂಡಿಸಿದೆ ಎಂಬುದು ಅವರ ಮಾತಿನಿಂದ ವ್ಯಕ್ತವಾಗುತ್ತಿತ್ತು.

ಜಿಲ್ಲೆಯ ಕಾರ್ಯಕರ್ತರು ಹಾಗೂ ಜನ ಪಕ್ಷದ ಬಗ್ಗೆ ಇಟ್ಟಿರುವ ಪ್ರೀತಿ ಬಗ್ಗೆ ಹೇಳದಿದ್ದರೆ ಅನ್ಯಾಯವಾದೀತು. ಮೂಡುಬಿದಿರೆ ಹಾಗೂ ಮಂಗಳೂರಿನ ಕಾರ್ಯಕ್ರಮದಲ್ಲೂ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ಈ ಜಿಲ್ಲೆಯ ಕಾರ್ಯರ್ತರು ಪಕ್ಷದ ಬಗ್ಗೆ ಇಟ್ಟಿರುವ ಪ್ರೀತಿ ಮಾತ್ರ ಪ್ರಶ್ನಾತೀತ. ಅವರ ಪಕ್ಷ ನಿಷ್ಠೆ ಅಷ್ಟು ದೃಢವಾಗಿದೆ. ಪಕ್ಷಕ್ಕಾಗಿ ದುಡಿಯಲು ಅವರು ಸದಾ ಸಿದ್ಧ. ಪಕ್ಷದ ಕಾರ್ಯಕ್ರಮಗಳನ್ನು ಅಷ್ಟೇ ಅಭಿಮಾನದಿಂದ ಜನರಿಗೆ ತಲುಪಿಸುತ್ತಾರೆ. ಅದಕ್ಕಾಗಿಯೇ ಜಿಲ್ಲೆಯಲ್ಲಿ ಪಕ್ಷ ಅಷ್ಟು ಬಲವಾಗಿ ಬೇರೂರಿದೆ. ಅಂತಹ ಕಾರ್ಯಕರ್ತರಿಗೆ ಎಷ್ಟು ನಮಿಸಿದರೂ ಸಾಲದು.

Leave a Reply