ಚುನಾವಣಾ ಸಂದೇಶ

ಚುನಾವಣಾ ಸಂದೇಶ

ನಿಮ್ಮೆಲ್ಲರ ಆಶೀರ್ವಾದಗಳೊಂದಿಗೆ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಅಭಿವೃದ್ಧಿಯೇ ನಮ್ಮ ಆಡಳಿತ ಮಂತ್ರ ಎಂಬ ಮುನ್ನುಡಿಯೊಂದಿಗೆ ಅನೇಕ ಸವಾಲುಗಳ ಮಧ್ಯೆ ಯಶಸ್ವಿಯಾಗಿ ೯ ತಿಂಗಳು ಪೂರೈಸಿದ್ದೇವೆ. ನಮ್ಮದು ನುಡಿದಂತೆ ನಡೆವ ಸರ್ಕಾರ. ಸರ್ಕಾರವನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ಜನಸ್ಪಂದನ, ಭಾಗ್ಯಲಕ್ಷ್ಮಿ ಯೋಜನೆ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲ ವೇತನ ಹೆಚ್ಚಳ, ರೈತರಿಗೆ ಶೇ.೩ ರ ಬಡ್ಡಿದರದಲ್ಲಿ ಸಾಲ ಯೋಜನೆ. ಮಕ್ಕಳ ಶಿಕ್ಷಣಕ್ಕೆ ಆದ್ಯತೆ, ಆರೋಗ್ಯ ಕವಚ, ತಾಯಿ ಭಾಗ್ಯ, ನಗರ ಮತ್ತು ಗ್ರಾಮೀಣ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳೊಂದಿಗೆ ಸೇವೆ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ.
ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿಯವರ ಸರಕಾರ ಇದೇ ಕನಸನ್ನು ಹೊತ್ತು ಸರ್ವಶಿಕ್ಷಾ ಅಭಿಯಾನ, ಪ್ರಧಾನಮಂತ್ರಿ ಗ್ರಾಮ ಸಡಕ್, ಸ್ವಜಲದಾರ, ಚತುಷ್ಪಥ ರಸ್ತೆ ಮುಂತಾದ ಯೋಜನೆಗಳ ಕೊಡುಗೆ ನೀಡಿದ್ದಾರೆ. ಆದರೆ ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರಕಾರದ ೫ ವರ್ಷದ ಅವಧಿಯಲ್ಲಿ ಬೆಲೆ ಏರಿಕೆ, ಭಯೋತ್ಪಾದನೆ, ನಿರುದ್ಯೋಗವನ್ನು ತಡೆಯುವಲ್ಲಿ ಸಂಪೂರ್ಣ ವಿಫಲವಾಯಿತು. ದೇಶದ ರಕ್ಷಣೆಗಾಗಿ ಮತ್ತು ದೇಶದಲ್ಲಿ ಅಭಿವೃದ್ಧಿಗಾಗಿ ಶ್ರೀ ಲಾಲ್ ಕೃಷ್ಣ ಅಡ್ವಾಣಿಯವರು ದೇಶದ ಪ್ರಧಾನಿಯಾಗಬೇಕು. ಕಮಲದ ಗುರುತಿಗೆ ನಿಮ್ಮ ಅಮೂಲ್ಯವಾದ ಮತವನ್ನು ನೀಡಿ ರಾಜ್ಯದಲ್ಲಿ ಬಿಜೆಪಿಯ ಹೆಚ್ಚು ಸಂಸದರನ್ನು ಆಯ್ಕೆ ಮಾಡಬೇಕೆಂದು ನಿಮ್ಮಲ್ಲಿ ವಿನಂತಿಸುತ್ತೇವೆ.

***********

Leave a Reply