ಯಡಿಯೂರಪ್ಪ ಸಜೆ ಸಂಜೆಗೆ ಮುಕ್ತಾಯ: ಮುಗಿಲು ಮುಟ್ಟಿದ ಸಂಭ್ರಮ

ಬೆಂಗಳೂರು, ನ. 8: ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಜಾಮೀನು ಮಂಜೂರಾದ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಬಿಎಸ್‌ವೈ ಅಭಿಮಾನಿಗಳ ಸಂತಸ ಮುಗಿಲುಮುಟ್ಟಿದೆ. ನಿನ್ನೆಯಷ್ಟೇ ಕಿರು ದೀಪಾವಳಿ ಆಚರಿಸಿದ್ದ ಬೆಂಗಳೂರಿನ ಜನ ಇಂದೂ ಪಟಾಕಿ ಹೊಡದು ಹರ್ಷದ ಹೊನಲಿನಲ್ಲಿ ತೇಲುತ್ತಿದ್ದಾರೆ. ರಾಜ್ಯಾದ್ಯಂತ ಇದೇ ವಾತಾವರಣ ಕಂಡುಬಂದಿದೆ.
ಈ ಮಧ್ಯೆ, ಯಡಿಯೂರಪ್ಪ ಬಿಡುಗಡೆ ಪ್ರಕ್ರಿಯೆ ಆರಂಭವಾಗಿದ್ದು, ಇಂದು ಸಂಜೆ 4 ಗಂಟೆ ವೇಳೆಗೆ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಗೊಳ್ಳುವ ಅಂದಾಜಿದೆ. ರಾಜ್ಯ ಸಚಿವ ಸಂಪುಟದಲ್ಲಿ ಯಡಿಯೂರಪ್ಪ ಅವರ ಕಟ್ಟಾಳುಗಳು ಒಬ್ಬೊಬ್ಬರಾಗಿ ಈಗಾಗಲೇ ಪರಪ್ಪನ ಅಗ್ರಹಾರದತ್ತ ದೌಡಾಯಿಸುತ್ತಿದ್ದಾರೆ.
ಸಂಜೆ ಯಡಿಯೂರಪ್ಪ ಅವರು ಜೈಲಿನಿಂದ ಹೊರಬರುತ್ತಿದ್ದಂತೆ ಭವ್ಯ ಸ್ವಾಗತ ನೀಡಲಾಗುವುದು ಎಂದು ಸಚಿವ ರೇಣುಕಾಚಾರ್ಯ ಘೋಷಿಸಿದ್ದಾರೆ. ಯಡಿಯೂರಪ್ಪ ಬಿಡುಗಡೆಯಾಗುತ್ತಿದ್ದಂತೆ ನೇರವಾಗಿ ದೇವಸ್ಥಾನಕ್ಕೆ ತೆರಳಿ, ಪೂಜೆ ಸಲ್ಲಿಸಿದ ಬಳಿಕ ಮನೆಗೆ ತೆರಳಲಿದ್ದಾರೆ ಎನ್ನಲಾಗಿದೆ.
http://kannada.oneindia.in/news/2011/11/08/yeddyurappa-gets-bail-celebrations-all-the-way-aid0135.html

Leave a Reply