ಬಿಎಸ್ ಯಡಿಯೂರಪ್ಪ ಅಪರಾಧಿಯಲ್ಲ – ಪೇಜಾವರ ಶ್ರೀ

ಚಿಂತಾಮಣಿ, ನ. 4: ಯಡಿಯೂರಪ್ಪನವರು ಇಂತಹ ಪರಿಸ್ಥಿತಿಯನ್ನು ನಿರ್ಮಿಸಿಕೊಳ್ಳಬಾರದಾಗಿತ್ತು. ನ್ಯಾಯಾಲಯದ ಅಂತಿಮ ತೀರ್ಪು ಬರುವ ಮುನ್ನವೇ ಯಡಿಯೂರಪ್ಪ ಅವರನ್ನು ಅಪರಾಧಿ ಎಂದು ಬಿಂಬಿಸುವುದು ಸರಿಯಲ್ಲ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ್ವರತೀರ್ಥ ಸ್ವಾಮೀಜಿಗಳು ಅಭಿಪ್ರಾಯ ಪಟ್ಟಿದ್ದಾರೆ.
ಮೇಲ್ನೋಟಕ್ಕ ಅವರ ಮೇಲೆ ಆರೋಪ ಸಾಬೀತಾಗಿದ್ದರೂ ನ್ಯಾಯಾಲಯದ ಅಂತಿಮ ತೀರ್ಪು ಬರುವ ತನಕ ಎಲ್ಲರೂ ಸಾವಧಾನದಿಂದ ಕಾಯಬೇಕಾಗುತ್ತದೆ. ನ್ಯಾಯಾಲಯದ ಮುಂದೆ ಎಲ್ಲರೂ ಒಂದೇ. ಯಾರು ಏನೇನು ಅನುಭವಿಸಬೇಕೆನ್ನುವುದು ವಿಧಿ ನಿಯಮ. ಹಾಗಾಗಿ ಕೋರ್ಟಿನ ಅಂತಿಮ ತೀರ್ಮಾನ ಹೊರಬೀಳುವ ಮುನ್ನ ಯಡಿಯೂರಪ ಅವರನ್ನು ಅಪರಾಧಿಯೆಂದು ಬಿಂಬಿಸುವುದು ಸರಿಯಲ್ಲ ಎಂದು ಶ್ರೀಗಳು ಹೇಳಿಕೆ ನೀಡಿದ್ದಾರೆ.
ಇಲ್ಲಿನ ರಾಯಲ್ ವಿದ್ಯಾಭವನದಲ್ಲಿ ಗುರುವಾರ ವಿದ್ಯಾರ್ಥಿಗಳಿಗೆ ಆಶೀರ್ವಚನ ನೀಡುತ್ತಾ ಮಾತನಾಡಿದ ಪೇಜಾವರ, ಚುನಾವಣೆಯ ಸಂದರ್ಭದಲ್ಲಿ ಆರಂಭವಾಗುವ ಭ್ರಷ್ಟಾಚಾರ ಪಕ್ಷಗಳು ಅಧಿಕಾರಕ್ಕೆ ಬಂದ ಮೇಲೂ ಮುಂದುವರಿಯುತ್ತಿರುವುದು ನೋವಿನ ಸಂಗತಿ. ಇಂದು ನಾವೆಲ್ಲಾ ಅನುಭವಿಸುತ್ತಿರುವ ರಾಜಕೀಯ ಅವ್ಯವಸ್ಥೆಗೆ ಭ್ರಷ್ಟಾಚಾರವೇ ಮೂಲ ಕಾರಣ ಎಂದು ವಿಷಾದ ವ್ಯಕ್ತಪಡಿಸಿದರು.

http://kannada.oneindia.in/news/2011/11/04/yeddurappa-should-not-have-done-this-pejavara-aid0189.html

Leave a Reply