‘ಭಾರತ್ ಕೆ ಮನ್ ಕಿ ಬಾತ್, ಮೋದಿ ಕೆ ಸಾತ್’ ಅಭಿಯಾನಕ್ಕೆ ಚಾಲನೆ

ಇಂದು ಶ್ರೀಸಾಮಾನ್ಯರ ಚುನಾವಣಾ ಪ್ರಣಾಳಿಕೆಯ ಅಭಿಪ್ರಾಯ ಸಂಗ್ರಹಕ್ಕಾಗಿ ಕೇಂದ್ರ ಸರಕಾರ ಆರಂಭಿಸಿರುವ ‘ಭಾರತ್ ಕೆ ಮನ್ ಕಿ ಬಾತ್, ಮೋದಿ ಕೆ ಸಾತ್’ ಅಭಿಯಾನಕ್ಕಾಗಿ ರಾಜ್ಯಾದ್ಯಂತ ಸಂಚರಿಸಲಿರುವ ರಥಗಳಿಗೆ ರಾಜ್ಯ ಬಿಜೆಪಿ ಕಚೇರಿಯಿಂದ ಚಾಲನೆ ನೀಡಲಾಯಿತು. ಬಿಜೆಪಿ ಆಡಳಿತದಿಂದ ಭಾರತ ಪ್ರಗತಿಯತ್ತ ಸಾಗುತ್ತಿದೆ. ದೇಶದ ಮತ್ತಷ್ಟು ಅಭಿವೃದ್ಧಿಗೆ ಜನರ ಸಲಹೆ ಅಗತ್ಯವಾಗಿದ್ದು, ಎಲ್ಲರೂ ಈ ಅಭಿಯಾನದಲ್ಲಿ ಭಾಗವಹಿಸಬೇಕು. ಪ್ರಧಾನಿ ಮೋದಿ ಅವರನ್ನು ಬೆಂಬಲಿಸಬೇಕು ಎಂದು ತಿಳಿಸಲಾಯಿತು.