ಬಯಲಾಗುತ್ತಿದೆ ಜನಮನದ ಅಭೀಕ್ಷೆ

ಬಯಲಾಗುತ್ತಿದೆ ಜನಮನದ ಅಭೀಕ್ಷೆ

  • Post author:
  • Post category:Blog
  • Post comments:0 Comments

ಬೆಂಗಳೂರಿನಿಂದ ಹೊರಟು, ಮಲೆನಾಡು, ಕರಾವಳಿಯಿಂದ ಅರೆಮಲೆನಾಡು ದಾಟಿ ನಿಧಾನವಾಗಿ ಬಯಲುಸೀಮೆಯತ್ತ ಯಾತ್ರೆ ತೆರಳುತ್ತಿದೆ. ಮಲೆನಾಡು, ಕರಾವಳಿ ಪ್ರದೇಶಗಳು ನೈಸರ್ಗಿಕವಾಗಿ ಶ್ರೀಮಂತವಾಗಿವೆ. ಆದರೆ ಬಯಲುಸೀಮೆ ಅದಕ್ಕೆ ತದ್ವಿರುದ್ಧ. ಬಯಲು ಸೀಮೆ ನೈಸರ್ಗಿಕವಾಗಿ ಅಷ್ಟು ಸಂಪದ್ಭರಿತವಾಗಿಲ್ಲ. ಮಳೆ ಬಂದರೆ ಬಂತು, ಇಲ್ಲವಾದರೆ ಇಲ್ಲ. ಮಳೆ ಇಲ್ಲ ಅಂದರೆ ಬೆಳೆಯೂ ಇಲ್ಲ. ಬೆಳೆ ಬಿಡಿ, ಕುಡಿಯುವ ನೀರಿಗೂ ತತ್ವಾರ. ಕುಡಿಯುವ ನೀರಿಗಾಗಿ ಕಿಲೋಮೀಟರ್ ಗಟ್ಟಲೆ ದೂರ ಹೋಗಬೇಕಾದ ಅನಿವಾರ್ಯತೆ ಇಂದಿಗೂ ಇದೆ. ಇಷ್ಟು ವರ್ಷದ ಆಡಳಿತದಿಂದಲೂ ಅವರ ನೀರಿನ ಬವಣೆ ನೀಗಿಸಲು ಸಾಧ್ಯವಾಗಿಲ್ಲ.

ಅದಕ್ಕೆ ಹಲವಾರು ಕಾರಣಗಳಿವೆ. ಅದಕ್ಕೆ ದೂರದೃಷ್ಟಿಯ ಯೋಜನೆಗಳ ಅಗತ್ಯವಿದೆ. ಕೇವಲ ಯೋಜನೆಗಳನ್ನು ಸಿದ್ಧಪಡಿಸಿದರೆ ಸಾಲದು, ಅವುಗಳನ್ನು ನಿಗದಿತ ಸಮಯದಲ್ಲಿ ಜಾರಿ ಮಾಡಬೇಕಿದೆ. ಆದರೂ ಬಯಲುಸೀಮೆಯ ಜನರನ್ನು ನೋಡಿದಾಗ ಕರುಳು ಚುರ್ ಎನ್ನುತ್ತದೆ. ಅವರು ಇಂದಿಗೂ ಕಷ್ಟಪಡುತ್ತಿರುವುದಕ್ಕೆ ರಾಜ್ಯವನ್ನಾಳಿದ ಎಲ್ಲರೂ ಹೊಣೆ ಎಂದು ಅನ್ನಿಸಿದ್ದು ಸುಳ್ಳಲ್ಲ.

ನಿನ್ನೆ ಬೆಲ್ಲದಬಾಗೇವಾಡಿಯಲ್ಲಿರುವ ಉಮೇಶ್ ಕತ್ತಿಯವರ ಸಕ್ಕರೆ ಕಾರ್ಖಾನೆ ವಸತಿ ಗೃಹದಲ್ಲಿ ಉಳಿದಿದ್ದೆ. ಇಂದು ಹುಕ್ಕೇರಿ, ನಿಪ್ಪಾಣಿ ಹಾಗೂ ಚಿಕ್ಕೋಡಿಯಲ್ಲಿ ಯಾತ್ರೆ ಕಾರ್ಯಕ್ರಮ ಮುಗಿಸಿ, ಅಂಕಲಿಯಲ್ಲಿ ಪ್ರಭಾಕರ ಕೋರೆಯವರ ಮನೆಯಲ್ಲಿ ವಾಸ್ತವ್ಯ. ಪ್ರಭಾಕರ ಕೋರೆಯವರು ನನ್ನ ಆತ್ಮೀಯ ಸ್ನೇಹಿತರು. ಅವರು ಕೆಎಲ್‍ಇ ಸಂಸ್ಥೆಯನ್ನು ಕಟ್ಟಿಬೆಳೆಸಿದ ರೀತಿ ನಿಜಕ್ಕೂ ದೊಡ್ಡಸಾಧನೆ. ಅಷ್ಟು ಕರ್ತವ್ಯ ನಿರತ, ಛಲವಂತ ವ್ಯಕ್ತಿಯಿಂದ ಮಾತ್ರ ಅದು ಸಾಧ್ಯ. ಅವರ ಜತೆ ಸಮಯ ಕಳೆಯುವುದೇ ಒಂದು ಸ್ಪೂರ್ತಿ.

Leave a Reply