ಆಶೀರ್ವಾದದ ದಿನ

ಆಶೀರ್ವಾದದ ದಿನ

  • Post author:
  • Post category:Blog
  • Post comments:0 Comments

ಒಂದು ದಿನದ ವಿಶ್ರಾಂತಿಯ ನಂತರ ಇಂದು ಮತ್ತೆ ಪರಿವರ್ತನಾ ಯಾತ್ರೆ ಮುಂದುವರಿಯಿತು. ಇಂದು ಒಂದರ್ಥದಲ್ಲಿ ಆಶೀರ್ವಾದ ಅಥವಾ ಪುಣ್ಯದ ದಿನ. ಬೆಳಗ್ಗೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ದೇವರ ದರ್ಶನ ಮಾಡಿ, ರಾಜ್ಯದ ಹಾಗೂ ಬಿಜೆಪಿಯ ಒಳಿತಿಗಾಗಿ ದೇವರಲ್ಲಿ ಪ್ರಾರ್ಥಿಸಿ ದಿನ ಆರಂಭಿಸಿದೆ. ಅಲ್ಲಿಂದ ಮುಂದೆ ಸಿಕ್ಕಿದ್ದೆಲ್ಲ ಕಾರ್ಯಕರ್ತರ, ಜನರ ಆಶೀರ್ವಾದ.

ಸುಳ್ಯದಲ್ಲಿ ಪರಿವರ್ತನಾ ಯಾತ್ರೆಯ ಸಭೆಯಲ್ಲಿ ಭಾಗವಹಿಸಲು ತೆರಳಿದೆ. ಸುಳ್ಯದಲ್ಲಿ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ಅಲ್ಲಿಂದ ಪುತ್ತೂರು ಹಾಗೂ ಬೆಳ್ತಂಗಡಿಯ ಸಭೆಗಳಲ್ಲಿ ಭಾಗವಹಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಇಲ್ಲಿನ ಕಾರ್ಯಕರ್ತರಲ್ಲಿ ಶಿಸ್ತು ಕೂಡ ಇರುವುದು ಗಮನಾರ್ಹ. ಹೀಗಾಗಿ ಇಲ್ಲಿನ ಕಾರ್ಯಕ್ರಮಗಳಲ್ಲಿ ಅಚ್ಚುಕಟ್ಟುತನ ಕಾಣುತ್ತದೆ. ಮೂರು ಕಡೆಗಳಲ್ಲೂ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಕೇರಳದಂತೆ ಮಾಡಲು ಈಗಿನ ಸರ್ಕಾರ ಪ್ರಯತ್ನಿಸುತ್ತಿರುವುದರ ಬಗ್ಗೆ ಜನರಲ್ಲಿ ಆಕ್ರೋಶವಿರುವುದು ನನ್ನ ಅರಿವಿಗೆ ಬಂತು.

ಬೆಳ್ತಂಗಡಿ ಸಭೆಯ ನಂತರ ಪುಣ್ಯ ಕ್ಷೇತ್ರವಾದ ಧರ್ಮಸ್ಥಳದಲ್ಲಿ ಉಳಿಯಲು ಆಗಮಿಸಿದ್ದೇನೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ದಿನಾರಂಭ ಮಾಡಿ, ಜನರ ಆಶೀರ್ವಾದ ಪಡೆದು, ದಿನಾಂತ್ಯಕ್ಕೆ ಧರ್ಮಸ್ಥಳಕ್ಕೆ ಬಂದಿರುವುದು ಪುಣ್ಯವೇ ಸರಿ.

Leave a Reply