೨ ಬಾರಿ ಯಶಸ್ವಿ ಜಾಗತಿಕ ಬಂಡವಾಳ ಹೂಡಿಕೆಗೆ ಬೃಹತ್ ಸಮಾವೇಶ

  • ಕೈಗಾರಿಕೆಗಳ ಸರ್ವಾಂಗೀಣ ಅಭಿವೃದ್ದಿಗೆ ಮತ್ತು ಐ.ಟಿ. ಮತ್ತು ಬಿ.ಟಿ. ಉತ್ತೇಜನಕ್ಕಾಗಿ ಲಕ್ಷಾಂತರ ಕೋಟಿ ರೂ.ಗಳ ಜಾಗತಿಕ ಬಂಡವಾಳ ಹೂಡಿಕೆಗೆ ಯಶಸ್ವಿ ಕಾರ್ಯಾಚರಣೆ. ೩.೯೩ ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿಕೆ. ೩೮೯ ಕೈಗಾರಿಕಾ ಯೋಜನೆಗಳ ಒಪ್ಪಂದ ೧೦ ಲಕ್ಷ ಹೊಸ ಉದ್ಯೋಗದ ನಿರೀಕ್ಷೆ ೨೫೦ ಕೋಟಿಗೂ ಹೆಚ್ಚು ಬಂಡವಾಳ ಹೂಡಿಕೆಯ ೧೧೩ ಬೃಹತ್ ಯೋಜನೆಗಳಿಗೆ ಅನುಮೋದನೆ. ಇಲ್ಲಿಯವರೆಗೆ ಒಟ್ಟು ೧೬೬೬ಯೋಜನೆಗಳಿಗೆ ಅನುಮೋದನೆ ಹಾಗೂ ಸುಮಾರು ೧೫.೧೯ ಲಕ್ಷ ಮಂದಿಗೆ ಉದ್ಯೋಗಾವಕಾಶ ದೊರಕಲಿದೆ.
  • ಕೈಗಾರಿಕಾ ರಂಗ ಉತ್ತೇಜನಕ್ಕಾಗಿ ಉದ್ದಿಮೆದಾರರುಗಳ ಬಂಡವಾಳ ಹೂಡಿಕೆಗೆ ಸರ್ಕಾರ ತೆರಿಗೆ ವಿನಾಯಿತಿ ಸಬ್ಸಿಡಿ ನೀಡಿಕೆ ಮತ್ತು ರಾಜ್ಯದಲ್ಲಿ ಹಸಿರು ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ.
  • ಕರ್ನಾಟಕವು ಬಂಡವಾಳ ಹೂಡಿಕೆಗೆ ಅತ್ಯಂತ ಪ್ರಶಸ್ತ ಸ್ಥಳವಾಗಿರುತ್ತದೆ ಎಂದು ಭಾರತೀಯ ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಗಳ ಮಹಾ ಮಂಡಳಿಯ ಏಪ್ರಿಲ್ 7, 2011ರ ವರದಿಯಲ್ಲಿ ಪ್ರಕಟಿತವಾಗಿರುತ್ತದೆ.

Leave a Reply