ಸಂಪುಟ ಪುನಾರಚನೆಗೆ ಯಡಿಯೂರಪ್ಪ ಸಿದ್ದತೆ

ಬೆಂಗಳೂರು: ಮುಂಬರುವ ವಿಧಾನಮಂಡಲದ ಅಧಿವೇಶನ ಮುಗಿಯುತ್ತಿದ್ದಂತೆ ರಾಜ್ಯ ಸಚಿವ ಸಂಪುಟವನ್ನು ಪುನಾರಚನೆ ಮಾಡಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ನಿರ್ಧರಿಸಿದ್ದಾರೆ.

ಸಚಿವ ಸಂಪುಟದಲ್ಲಿ ಈಗ ಏಳು ಸ್ಥಾನಗಳು ಖಾಲಿಯಾಗಿವೆ. ವಿಧಾನಮಂಡಲದ ಸಂಖ್ಯಾಬಲದ ಆಧಾರದಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿ ಸೇರಿ 34 ಸಚಿವರಿರಬೇಕು. ಆದರೆ ಈಗ 27 ಜನರಿದ್ದಾರೆ. ಇದರಿಂದಾಗಿ 7 ಸ್ಥಾನಗಳು ಖಾಲಿಯಾಗಿವೆ. ಈ ಖಾಲಿ ಸ್ಥಾನಗಳನ್ನು ಭರ್ತಿ ಮಾಡುವುದು ಮಾತ್ರವಲ್ಲದೇ ಸಂಪುಟವನ್ನು ಸಮಗ್ರವಾಗಿ ಪುನಾರಚನೆ ಮಾಡುವುದು ಯಡಿಯೂರಪ್ಪರ ಉದ್ದೇಶವಾಗಿದೆ.

http://www.udayavani.com/news/70675L15-%E0%B2%B8-%E0%B2%AA-%E0%B2%9F-%E0%B2%AA-%E0%B2%A8-%E0%B2%B0%E0%B2%9A%E0%B2%A8-%E0%B2%97–%E0%B2%AF%E0%B2%A1-%E0%B2%AF-%E0%B2%B0%E0%B2%AA-%E0%B2%AA-%E0%B2%B8-%E0%B2%A6-%E0%B2%A6%E0%B2%A4-.html