ರಾಜ್ಯಕ್ಕೆ ಅಗತ್ಯ ಪ್ರಮಾಣದ ರಸಗೊಬ್ಬರಗಳ ಪೂರೈಕೆಗೆ ಆಗ್ರಹಿಸಿ ಕೇಂದ್ರ ಕೃಷಿ ಹಾಗೂ ರಸಗೊಬ್ಬರ ಸಚಿವರುಗಳಿಗೆ ಮುಖ್ಯಮಂತ್ರಿಗಳ ಪತ್ರ

ಪ್ರಕಟಣೆಯ ಕೃಪೆಗಾಗಿ

ರಾಜ್ಯಕ್ಕೆ ಅಗತ್ಯ ಪ್ರಮಾಣದ ರಸಗೊಬ್ಬರಗಳ ಪೂರೈಕೆಗೆ ಆಗ್ರಹಿಸಿ ಕೇಂದ್ರ ಕೃಷಿ ಹಾಗೂ ರಸಗೊಬ್ಬರ ಸಚಿವರುಗಳಿಗೆ ಮುಖ್ಯಮಂತ್ರಿಗಳ ಪತ್ರ

ಉತ್ತಮ ಮಳೆಯಾಗಿ ಕೃಷಿ ಚಟುವಟಿಕೆಗಳು ಭರದಿಂದ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ರಾಜ್ಯಕ್ಕೆ ತುರ್ತಾಗಿ ಅಗತ್ಯವಿರುವ ಯೂರಿಯಾ, ಕಾಂಪ್ಲೆಕ್ಸ್ ಹಾಗೂ ಎಂ.ಒ.ಪಿ. ರಸಗೊಬ್ಬರಗಳನ್ನು ಬೇಡಿಕೆಗನುಗುಣವಾಗಿ ಸಮರ್ಪಕವಾಗಿ ಸರಬರಾಜು ಮಾಡಲು ಆಗ್ರಹಿಸಿ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರು ಕೇಂದ್ರ ಕೃಷಿ ಸಚಿವರಾದ ಶ್ರೀ ಶರದ್‌ಪವಾರ್ ಮತ್ತು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರಗಳ ಸಚಿವರಾದ          ಶ್ರೀ ಎಂ.ಕೆ. ಅಳಗಿರಿ ರವರಿಗೆ ಪತ್ರ ಬರೆದಿದ್ದಾರೆ.

ರಾಜ್ಯದ ಜುಲೈ ಮಾಹೆಯ ಯೂರಿಯಾ ಬೇಡಿಕೆಯ ಪ್ರಮಾಣವು ೧,೭೦,೦೦೦ ಟನ್‌ಗಳಾಗಿದ್ದು, ಕೇಂದ್ರ ಸರ್ಕಾರವು ಕೇವಲ ೯೩,೫೦೦ ಟನ್ ಮಾತ್ರ ಹಂಚಿಕೆ ಮಾಡಿದ್ದು, ೧೨.೦೭.೨೦೦೯ರವರೆಗೆ ಕೇವಲ ೪೮,೦೪೮ ಟನ್‌ಗಳಷ್ಟು ಮಾತ್ರ ಸರಬರಾಜಾಗಿದೆ.                    ಈ ಕೊರತೆಯಿಂದಾಗಿ ಯೂರಿಯಾ ಅಗತ್ಯವಿರುವ ರೈತರು, ವಿಶೇಷವಾಗಿ ಹಾವೇರಿ ಹಾಗೂ ದಾವಣಗೆರೆಗಳಲ್ಲಿ ತೀವ್ರ ಸಂಕಷ್ಟಕ್ಕೊಳಗಾಗಿದ್ದು, ಕಾನೂನು ಹಾಗೂ ಸುವ್ಯವಸ್ಥೆ ಹದಗೆಡುತ್ತಿದೆ.

ಹಾಗೆಯೇ ಜುಲೈ ಮಾಹೆಗೆ ರಾಜ್ಯದ ಕಾಂಪ್ಲೆಕ್ಸ್ ರಸಗೊಬ್ಬರ ಹಾಗೂ ಎಂ.ಒ.ಪಿ. ರಸಗೊಬ್ಬರದ ಬೇಡಿಕೆಯು ಕ್ರಮವಾಗಿ ೧,೨೪,೦೦೦ ಟನ್ ಹಾಗೂ ೫೪,೦೦೦ ಟನ್‌ಗಳಷ್ಟಿದ್ದು, ಕೇಂದ್ರವು ಈ ಬಾಬ್ತು ಕೇವಲ ೪೫,೪೦೦ ಟನ್‌ಗಳು ಹಾಗೂ ೧೭,೫೦೦ ಟನ್‌ಗಳನ್ನು ಹಂಚಿಕೆ ಮಾಡಿದೆ.  ಪರಿಸ್ಥಿತಿಯ ತೀವ್ರತೆಯನ್ನರಿತು, ರೈತರ ಸಹನೆ ಮೀರಿ ಅಹಿತಕರ ಘಟನೆಗಳು ಜರುಗುವ ಮುನ್ನ ಕೇಂದ್ರ ಸರ್ಕಾರವು ಎಲ್ಲಾ ರಸಗೊಬ್ಬರಗಳನ್ನು ಬೇಡಿಕೆಗನುಗುಣವಾಗಿ ಅಗತ್ಯ ಪ್ರಮಾಣದಲ್ಲಿ ಸರಬರಾಜು ಮಾಡುವಂತೆ ಕೇಂದ್ರ ಸಚಿವರಿಗೆ ಮುಖ್ಯಮಂತ್ರಿಗಳು ಈ ಪತ್ರದಲ್ಲಿ ಆಗ್ರಹಿಸಿದ್ದಾರೆ.
——————————————————–

(ಎನ್. ಭೃಂಗೀಶ್)
ಮುಖ್ಯ ಮಂತ್ರಿಗಳ ಪತ್ರಿಕಾ ಕಾರ್ಯದರ್ಶಿ

English Version

for kind publication

Ensure adequate fertilizers’ supply – CM writes to Union Agriculture Minister and Chemicals &  Fertilizers Minister

In the wake of inadequate allotment and supply of Urea, Complex and MOP fertilizers leading to extreme hardship to the farmers of the State during the present Kharif season, CM B.S. Yeddyurappa has written a letter to Union Minister of Agriculture, Sri Sharad Pawar and Union Chemicals and Fertilizers minister Sri M.K. Azhagiri urging them to ensure adequate supply of the required fertilizers.

The State’s requirement of Urea as a top-dressing fertilizer for the month of July is 1,70,000 tonnes.  But, the Government of India has made an allocation of 93,500 tonnes only and the quantity supplied up to 12th July is only 48,048 tonnes.  This shortage has resulted in panic among farmers besides creating law and order problems in some districts.

Further Government of India has allocated only 45,400 tonnes of complex fertilizers and 17,500 tonnes of MOP against the requirement of 1,24,000 tonnes of complex fertilizers and 54,000 tonnes MOP respectively for the month of July 2009.  In this background, CM, in his letter has requested the Union Ministers to continuously monitor and ensure adequate supply of required fertilizer to the State, to avoid worsening of the situation.

—————————————————————————————

(N. Bhrungeesh)

Press Secretary to Chief Minister

Leave a Reply