ಯಡಿಯೂರಪ್ಪ ಹೋರಾಟಕ್ಕೆ ಗಡ್ಕರಿ ಶ್ಲಾಘನೆ

ಯಡಿಯೂರಪ್ಪ ಹೋರಾಟಕ್ಕೆ ಗಡ್ಕರಿ ಶ್ಲಾಘನೆ

ಬಳ್ಳಾರಿ, ಆ. 12 : ರೆಡ್ಡಿ ಸಹೋದರರಿಗೆ ಗಾಡ್ ಫಾದರ್ ಆಗಿ ಬಂದಿರುವ ನಿತೀನ್ ಗಡ್ಕರಿ ಅವರನ್ನು ರೆಡ್ಡಿ ಬ್ರದರ್ಸ್ ಮೈಸೂರು ಟೋಪಿ ಹಾಕಿ, ಖಡ್ಗ ಕೊಟ್ಟು ಸನ್ಮಾನಿಸಿದರು. ಸಮಾರಂಭಕ್ಕೂ ಮುನ್ನ ಗಡ್ಕರಿಯವರು ಬಳ್ಳಾರಿ ಏರ್ ಪೋರ್ಟ್ ರಸ್ತೆಯ ಕಾಮಗಾರಿಯ ಭೂಮಿಪೂಜೆ ಮಾಡಿದರು. ಸಮಾವೇಶವನ್ನು ಉದ್ದೇಶಿಸಿ ಮಾತನಾಡಿ, ರಾಜಕೀಯಕ್ಕೆ ಕಾಲಿಟ್ಟಾಗಿನ ದಿನಗಳನ್ನು ನೆನಪಿಸಿಕೊಂಡರು.

ಬಿಜೆಪಿಯಲ್ಲಿ ನಾನು ಸಾಮಾನ್ಯ ಕಾರ್ಯಕರ್ತನಾಗಿದ್ದೆ. ಗೋಡೆ ಬರೆಹಗಳನ್ನು ಬರೆಯುತ್ತಾ, ಪೋಸ್ಟರ್‌ಗಳನ್ನು ಹಚ್ಚುತ್ತಾ ಪಕ್ಷದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದೆ. ವಾಜಪೇಯಿ ಅವರು ಕಣ್ಣಾರೆ ಕಾಣಲು ಸದಾಕಾಲ ಹಪಹಪಿಸುತ್ತಿದ್ದೆ. ನನ್ನ ತಂದೆ ಶ್ರೀಮಂತರಲ್ಲ, ತಾಯಿ ರಾಯಕೀಯದಲ್ಲಿ ಇರಲಿಲ್ಲ. ನಾನೊಬ್ಬ ಕೃಷಿಕನ ಪುತ್ರ. ನಾನು ಸಾಮಾನ್ಯ ಕೃಷಿಕ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷನಾಗುತ್ತೇನೆ ಎಂದು ಎಂದೂಕೂಡ ಯೋಚಿಸಿರಲಿಲ್ಲ, ಕನಸನ್ನೂ ಕಂಡಿರಲಿಲ್ಲ. ಇಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಆಗಿದ್ದರೂ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನೇ ಎಂದು ಹೇಳಿದರು.

ಯಡಿಯೂರಪ್ಪ ಅವರ ಆಡಳಿತ ಕರ್ನಾಟಕದಲ್ಲಿ ಉತ್ತಮವಾಗಿತ್ತು. ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿ ರಾಷ್ಟ್ರದಲ್ಲೇ ಭಿನ್ನವಾಗಿ ಗುರುತಿಸಿಕೊಂಡಿದ್ದರು. ರೈತರಿಗೆ ಶೇ. 1ರ ಬಡ್ಡಿ ಯೋಜನೆಯನ್ನು ಪ್ರಕಟಿಸಿ ರೈತಪರವಾಗಿದ್ದರು. ದಶಕಗಳ ಕಾಲ ವಿರೋಧಪಕ್ಷದಲ್ಲಿ ಇದ್ದುಕೊಂಡೇ ಪಕ್ಷವನ್ನು ಸಂಘಟಿಸಿ, ಹಗಲಿರುಳೂ ಶ್ರಮಿಸಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ ಎಂದು ಯಡಿಯೂರಪ್ಪ ಅವರ ಹೋರಾಟವನ್ನು ಶ್ಲಾಘಿಸಿದರು.

ಬಿ.ಎಸ್. ಯಡಿಯೂರಪ್ಪ ಅವರ ಜೊತೆಯಲ್ಲಿ ಅನಂತ್ ಕುಮಾರ್ ಅವರು ಕೂಡ ರಾಜ್ಯವನ್ನು ಸುತ್ತಿದ್ದಾರೆ. ಪಕ್ಷವನ್ನು ಕಟ್ಟಿದ್ದಾರೆ. ಪ್ರಸ್ತುತ ಬಿ.ಎಸ್. ಯಡಿಯೂರಪ್ಪ ಅವರಿಗೆ ಕಾನೂನು ಮತ್ತು ರಾಜಕೀಯ ಆರೋಪಗಳು ಆವರಿಸಿವೆ. ಈ ಆರೋಪಗಳಿಂದ ಮುಕ್ತರಾಗುವ ಸವಾಲು ಇದೆ. ಮುಂದಿನ ದಿನಗಳಲ್ಲಿ ಈ ಎಲ್ಲಾ ಆರೋಪಗಳಿಂದ ಬಿ.ಎಸ್.ವೈ, ಪಕ್ಷ ಮತ್ತು ಆರೋಪಿತರು ಮುಕ್ತರಾಗುವ ವಿಶ್ವಾಸವಿದೆ ಎಂದರು.

http://thatskannada.oneindia.in/news/2011/08/12/gadkari-appreciates-yeddyurappas-fighting-spirits-aid0038.ht

 

Leave a Reply