ಮುಖ್ಯಮಂತ್ರಿಗಳಿಂದ ಎಂಎಸ್ಎಂಇಗೆ ಪೂರಕ ವಾತಾವರಣದ ಭರವಸೆ

ಮುಖ್ಯಮಂತ್ರಿಗಳಿಂದ ಎಂಎಸ್ಎಂಇಗೆ ಪೂರಕ ವಾತಾವರಣದ ಭರವಸೆ

ಕರ್ನಾಟಕದ ಹೊಸ ಕೈಗಾರಿಕಾ ನೀತಿ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂಎಸ್ಎಂಇ) ಕುರಿತು ಗಮನಹರಿಸಲಿದೆ ಮತ್ತು ಸರ್ಕಾರ ಉದ್ಯಮ ಸ್ನೇಹಿ ವಾತಾವರಣವನ್ನು ಸೃಷ್ಟಿಸಲಿದೆ ಎಂದು ಮುಖ್ಯಮಂತ್ರಿ ಶ್ರೀ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ಶನಿವಾರ ಗ್ಲೋಬಲ್ ಅಲೈಯನ್ಸ್ ಫಾರ್ ಮಾಸ್ ಎಂಟ್ರಪ್ರೆನ್ಯೂರ್ಶಿಪ್ (ಜಿಎಎಂಇ) ತಯಾರು ಮಾಡಿದ ವರದಿಯೊಂದನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಬಿಡುಗಡೆ ಮಾಡಿದ ಅವರು, ಕರ್ನಾಟಕ ಭೂ ಸುಧಾರಣಾ ಕಾಯ್ದೆ, ಕರ್ನಾಟಕ ಕೈಗಾರಿಕಾ (ಸೌಲಭ್ಯಗಳ) ಕಾಯ್ದೆ ಮೊದಲಾದವುಗಳ ಮೂಲಕ ವಿವಿಧ ಸೌಲಭ್ಯಗಳನ್ನು ಒದಗಿಸಿ ರಾಜ್ಯದ ಎಂಎಸ್ಎಂಇ ಗಳು ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಎದುರಿಸುವಂತೆ ಮಾಡುವುದು ಸರ್ಕಾರದ ಉದ್ದೇಶ, ಎಂದರು.

Leave a Reply