ಭಾಷಣ: ಜೈವಿಕ ಇಂಧನ ಅಭಿವೃದ್ಧಿ ಮತ್ತು ಅನುಷ್ಠಾನ ರಾಷ್ಟ್ರೀಯ ಕಾರ್ಯಾಗಾರ

ಜೈವಿಕ ಇಂಧನ ಅಭಿವೃದ್ಧಿ ಮತ್ತು ಅನುಷ್ಠಾನ ರಾಷ್ಟ್ರೀಯ ಕಾರ್ಯಾಗಾರ

ಮಾನ್ಯ ಮುಖ್ಯಮಂತ್ರಿಯವರ ಭಾಷಣ

೨೧.೨.೨೦೧೧ / ಬೆಳಿಗ್ಗೆ ೧೦.೦೦ ಗಂಟೆಗೆ / ಚಾಮರಾಜ ಕಲ್ಯಾಣ ಮಂಟಪದ ಮುಂಭಾಗ, ಜಯನಗರ

ಜೈವಿಕ ಇಂಧನ ಅಭಿವೃದ್ಧಿ ಮತ್ತು ಅನುಷ್ಠಾನಕ್ಕೆ ಸಂಬಂಧಿಸಿದ ರಾಷ್ಟ್ರೀಯ ಕಾರ್ಯಾಗಾರವನ್ನು ಬೆಂಗಳೂರಿನಲ್ಲಿ ಆಯೋಜಿಸಲು ಪ್ರೇರಕರಾಗಿರುವ ಬಿ.ಜೆ.ಪಿ.ಯ ರಾಷ್ಟ್ರೀಯ ಅಧ್ಯಕ್ಷ ಶ್ರೀ ನಿತಿನ್ ಗಡ್ಕರಿ ಜಿ,
ರಾಜ್ಯಸಭಾ ಸದಸ್ಯರೂ ಹಾಗೂ ಬಿಜೆಪಿಯ ವರಿಷ್ಠ ನಾಯಕರಾದ ಶ್ರೀ ಎಂ. ವೆಂಕಯ್ಯನಾಯ್ಡು ಜಿ,
ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ ಕೆ.ಎಸ್. ಈಶ್ವರಪ್ಪ ಅವರೆ,
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ ಜಗದೀಶ್ ಶೆಟ್ಟರ್ ಅವರೆ,
ಮಹನೀಯರೆ ಮತ್ತು ಮಹಿಳೆಯರೆ,

೧.    ಪೆಟ್ರೋಲಿಯಂ ಆಧಾರಿತ ನೈಸರ್ಗಿಕ ಇಂಧನ ಮೂಲಗಳು ಬರಿದಾಗುತ್ತಿರುವ ಹಾಗೂ ಪರಿಸರ ಅಸಮತೋಲನ ಮತ್ತು ಜಾಗತಿಕ ಬಿಸಿಯೇರಿಕೆಯಂತಹ ಬೃಹತ್ ಸವಾಲನ್ನು ಎದುರಿಸುತ್ತಿರುವ ಈ ಸಂಕೀರ್ಣ ಸಂದರ್ಭದಲ್ಲಿ ಪರ್ಯಾಯ ಇಂಧನ ಮೂಲಗಳತ್ತ ಗಮನಹರಿಸುವುದು ಅನಿವಾರ್ಯ ಅಗತ್ಯವಾಗಿದೆ.
೨.    ಈ ಹಿನ್ನೆಲೆಯಲ್ಲಿ ಜೈವಿಕ ಇಂಧನ ಅಭಿವೃದ್ಧಿ ಕುರಿತ ರಾಷ್ಟ್ರೀಯ ಕಾರ್ಯಾಗಾರಕ್ಕೆ ಅತ್ಯಂತ ಮಹತ್ವವಿದೆ.  ಬಿಜೆಪಿ ಜೈವಿಕ ಇಂಧನ ಪ್ರಕೋಷ್ಠ ಇಂತಹ ಕಾರ್ಯಾಗಾರ ಆಯೋಜಿಸಿರುವುದು ಸ್ವಾಗತಾರ್ಹ.
೩.    ಪರ್ಯಾಯ ಇಂಧನ ಮೂಲಗಳ ಅಭಿವೃದ್ಧಿ ಮತ್ತು ಅನುಷ್ಠಾನದ ದಿಕ್ಕಿನಲ್ಲಿ ಕರ್ನಾಟಕ ಇತರ ರಾಜ್ಯಗಳಿಗಿಂತ ಮುಂಚೂಣಿಯಲ್ಲಿದೆ ಎಂಬುದು ಸರ್ವವೇದ್ಯ ವಿಚಾರವಾಗಿದೆ.
೪.    ೫೦ರ ದಶಕದಲ್ಲಿಯೇ ಮಂಡ್ಯದ ಸಕ್ಕರೆ ಕಾರ್ಖಾನೆಯಲ್ಲಿ ಎಥನಾಲ್ ಉತ್ಪಾದಿಸಿ ಮುಂಬೈಗೆ ದೊಡ್ಡ ಪ್ರಮಾಣದಲ್ಲಿ ಸರಬರಾಜು ಮಾಡುತ್ತಿದ್ದ ವಿಚಾರ ನಮಗೆಲ್ಲಾ ತಿಳಿದಿದೆ.  ಮುಂಬೈ ನಗರ ಸಾರಿಗೆ ಬಸ್ಸುಗಳಲ್ಲಿ ಇದರ ಬಳಕೆಯಾಗುತ್ತಿತ್ತು.
೫.    ಕಳೆದ ೨ ದಶಕಗಳಿಂದೀಚೆಗೆ ರಾಜ್ಯದಲ್ಲಿ ಪರ್ಯಾಯ ಇಂಧನ ಮೂಲವಾದ ಜೈವಿಕ ಇಂದನದ ಅಭಿವೃದ್ಧಿ ಮತ್ತು ಬಳಕೆಯನ್ನು ಜನಪ್ರಿಯಗೊಳಿಸುವ ಪ್ರಯತ್ನಗಳು ಜರುಗಿವೆ.
೬.    ೨೦೦೮ರಲ್ಲಿ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ಪರ್ಯಾಯ ಇಂಧನ ಮೂಲಗಳು ವಿಶೇಷವಾಗಿ ಜೈವಿಕ ಇಂಧನ ಮೂಲಗಳ ಸಮಗ್ರ ಅಭಿವೃದ್ಧಿ ಮತ್ತು ಜೈವಿಕ ಇಂಧನದ ಉತ್ಪಾದನೆಯ ದಿಕ್ಕಿನಲ್ಲಿ ವಿಶೇಷ ಪ್ರಯತ್ನಗಳನ್ನು ಮಾಡಲಾಯಿತು.
೭.    ನಮ್ಮ ಸರ್ಕಾರ ಕೈಗೊಂಡಿರುವ ಕಾರ್ಯಕ್ರಮಗಳು ಹಾಗೂ ಅದರ ಫಲಶೃತಿ ಬಗ್ಗೆ ವಿವರಿಸುವ ಮುನ್ನ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಇತರ ಹಿರಿಯ ನಾಯಕರ ಮಾಹಿತಿಗಾಗಿ ಕೆಲ ವಿಚಾರಗಳನ್ನು ಆಂಗ್ಲ ಭಾಷೆಯಲ್ಲಿ ಹಂಚಿಕೊಳ್ಳಬಯಸುತ್ತೇನೆ.
1. I am extremely happy that our National party President Sri Nithin ji, and another senior leader Sri Venkaiahji are here with us today in this National Conference on effective implementation of Bio-fuels programme.

2. I am equally happy to note that Karnataka State has been a pioneer in the field of developing alternative fuel sources, especially bio-fuels.

3. As soon as I took over the office of the Chief Minister of Karnataka, a Task Force on Bio-fuels was formed under the chairmanship of Shri Y.B. Ramakrishna, a bio-fuel professional with rich experience in the related field.

4. With the assistance of the Task Force, our government has taken several initiatives like –

a) finalisation of the Karnataka Bio-fuel Policy;

b) formation of Karnataka State Bio-fuel Development Board;

c) massive planting of non-edible oil species;

d) establishment of Bio-fuel parks; and demonstration units etc.

5. We have also undertaken “Hasiru Honnu” and “Baradu Bangara” programmes through which over 35,000 hectares of government as well as private lands have been brought under cultivation of bio-fuel crops.

6. Over 1,17,000 hectares of farmers fallow land has been identified in North Karnataka where we plan to launch a major bio-fuel plantation programme.

7. We are making earnest efforts to make bio-fuels programme a mass movement in Karnataka.  To realize this goal, we have trained N.G.Os., farmers, women self-help groups, village forest committees, village tank users groups etc., and have involved them in raising and managing bio-fuel plantations.

8. Universities, engineering and bio-technology colleges etc., have been engaged in research and developmental activities.

9. We are also encouraging the entrepreneurs to set up production units in Karnataka.  One such unit has been inaugurated just yesterday.

10. Today, Karnataka is a leading producer of Ethanol in the country.  We produce about 135 million litres in a year.

11. K.S.R.T.C. has been a pioneer in the field of bio-fuel usage.  Nearly 2,000 buses are being run by using different blends of bio-diesel in diesel.  An experiment of blending ethanol in diesel is being carried out by K.S.R.T.C.

12. The State is not only selling petrol blended with 5% ethanol, but supplying ethanol for blending by oil marketing companies outside.

13. Our programmes such as “Hasiru Honnu” and “Baradu Bangara” to raise bio-fuel plantations have been hailed as land mark initiatives in the bio-fuel field. Due to these and other initiatives, the country is looking up to Karnataka for guidance in the bio-fuel sector.
೨೧.    ಕರ್ನಾಟಕ ರಾಜ್ಯವನ್ನು ಜೈವಿಕ ಇಂಧನ ಕ್ಷೇತ್ರದಲ್ಲಿ ಮುಂಚೂಣಿ ರಾಜ್ಯವನ್ನಾಗಿ ಅಭಿವೃದ್ಧಿಪಡಿಸಲು ನಮ್ಮ ಸರ್ಕಾರ ಬದ್ಧವಾಗಿದೆ.  ಈಗಾಗಲೇ ಜೈವಿಕ ಇಂಧನ ನೀತಿಯನ್ನು ನಾವು ರೂಪಿಸಿ ಜಾರಿಗೆ ತಂದಿದ್ದೇವೆ.
೨೨.    ೨೦೧೦ರ ಡಿಸೆಂಬರ್ ನಿಂದ ಪ್ರಾರಂಭಿಸಲಾಗಿರುವ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಮಾರ್ಗದರ್ಶನದಲ್ಲಿ ಜೈವಿಕ ಇಂಧನ ಮೂಲಗಳ ಅಭಿವೃದ್ಧಿ ಮತ್ತು ಬಳಕೆಗೆ ಅಗತ್ಯವಾದ ಕಾರ್ಯತಂತ್ರ ರೂಪಿಸಲಾಗುವುದು.
೨೩.    ಕೃಷಿಯೇತರ ಭೂಮಿ ಮತ್ತು ಬಂಜರು ಭೂಮಿಗಳಲ್ಲಿ ಯಥೇಚ್ಚ ಜೈವಿಕ ಇಂಧನ ಸಸ್ಯಗಳಾದ ಹೊಂಗೆ, ಬೇವು, ಸಿಮರೂಬಾ, ಜೆತ್ರೋಪಾ, ಹಿಪ್ಪೆ ಇತ್ಯಾದಿ ಸಸ್ಯಗಳನ್ನು ನೆಟ್ಟು ರೈತರು ದೊಡ್ಡ ಪ್ರಮಾಣದಲ್ಲಿ ಕೃಷಿಯೇತರ ಆದಾಯ ಪಡೆಯಲು ಅವಕಾಶಗಳಿವೆ.  ರಾಜ್ಯ ಸರ್ಕಾರ ರೂಪಿಸಿರುವ ಹಸಿರು ಹೊನ್ನು ಮತ್ತು ಬರಡು ಬಂಗಾರ ಕಾರ್ಯಕ್ರಮಗಳು ಇದಕ್ಕೆ ನೆರವಾಗಲಿವೆ.
೨೪.    ನಮ್ಮ ರಾಷ್ಟ್ರದ ಒಟ್ಟು ಆಯವ್ಯಯದ ಶೇ.೩೩ಕ್ಕೂ ಹೆಚ್ಚು ಹಣ ಅಂದರೆ ಸುಮಾರು ೩.೭೫ ಲಕ್ಷ ಕೋಟಿ ರೂ.ಗಳು ಪೆಟ್ರೋಲಿಯಂ ಉತ್ಪನ್ನಗಳ ಆಮದಿಗೆ ವೆಚ್ಚವಾಗುತ್ತಿದೆ.  ಆದ್ದರಿಂದ ರಾಷ್ಟ್ರದ ಬೊಕ್ಕಸದ ಮೇಲಿನ ಹೊರೆಯನ್ನು ತಗ್ಗಿಸಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹೆಚ್ಚು ಸಂಪನ್ಮೂಲ ದೊರೆಯುವಂತೆ ಮಾಡುವುದರ ಜೊತೆಗೆ ಪರಿಸರದ ಮೇಲೆ ಆಗುತ್ತಿರುವ ಪ್ರತಿಕೂಲ ಪರಿಣಾಮಗಳನ್ನು ಹತ್ತಿಕ್ಕಲು ಹೈಡ್ರೋ ಕಾರ್ಬನ್ ಆಧಾರಿತ ನೈಸರ್ಗಿಕ ಇಂಧನಗಳ ಬಳಕೆ ಕಡಿಮೆ ಮಾಡಿ ಪರ್ಯಾಯ ಇಂಧನಗಳ ಬಳಕೆಯತ್ತ ಗಮನಹರಿಸಲು ಈ ಕಾರ್ಯಾಗಾರ ಪ್ರೇರಕವಾಗಲಿ ಎಂದು ಆಶಿಸಿ, ನನ್ನ ಮಾತುಗಳನ್ನು ಮುಗಿಸುತ್ತೇನೆ.
ನಮಸ್ಕಾರ
******

Leave a Reply