ಬೆಂಗಳೂರನ ಸರ್ವಾಂಗೀಣ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮ

ಹೊಸದಾಗಿ ಆಯ್ಕೆಗೊಂಡ ಕಾರ್ಪೋರೇಟರ್ ಗಳ ಜತೆ ಮುಖ್ಯಮಂತ್ರಿಗಳು
ಹೊಸದಾಗಿ ಆಯ್ಕೆಗೊಂಡ ಕಾರ್ಪೋರೇಟರ್ ಗಳ ಜತೆ ಮುಖ್ಯಮಂತ್ರಿಗಳು

ಬೆಂಗಳೂರಿನ ಜನ ಅಭಿವೃದ್ಧಿಗೆ, ಹೊಸ ಚಿಂತನೆಗೆ ಆಧ್ಯತೆ ನೀಡಿದ್ದಾರೆ. ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದಿದ್ದು, ಈ ಮೂಲಕ ಬಿಜೆಪಿ ಸರಕಾರದ ಮೇಲೆ ಜವಾಬ್ದಾರಿ ಹೆಚ್ಚಾಗಿದೆ. ಬೆಂಗಳೂರಿನ ಸರ್ವಾಂಗೀಣ ಅಭಿವೃದ್ಧಿ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

ಬೆಂಗಳೂರಿನಲ್ಲಿ ಅನೇಕ ಅಭಿವೃದ್ದಿ ಕಾರ್ಯಗಳು ನಡೆಯುತ್ತಿದೆ. ಇದೀಗ ನಮ್ಮ ಮುಂದಿರುವ ಮುಖ್ಯ ಗುರಿಯೆಂದರೆ, ಕುಡಿಯುವ ನೀರಿನ ಪ್ರತಿ ವಾರ್ಡ್ ಗೂ ತಲುಪಿಸುವ ಜವಾಬ್ದಾರಿ ಹಾಗೂ ವಿದ್ಯುತ್ ಹಾಗೂ ಮೂಲಭೂತ ಸೌಕರ್ಯಗಳು ನೀಡುವುದಕ್ಕೆ ಹೆಚ್ಚಿನ ಅಧ್ಯತೆ ನೀಡುತ್ತೇವೆ ಎಂದು ಅವರು ವಿವರಿಸಿದರು.