ಬಿಜೆಪಿಯಲ್ಲಿ ಸಂಭ್ರಮಾಚರಣೆ; ಸಿಎಂಗೆ ಅದ್ದೂರಿ ಸ್ವಾಗತ

ಬೆಂಗಳೂರು: ಆಡಳಿತಾರೂಢ ಬಿಜೆಪಿಯಲ್ಲಿ ಸೋಮವಾರ ಇಡೀ ದಿನ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು.

ಬಿಜೆಪಿ ಸರ್ಕಾರವನ್ನು ವಜಾಗೊಳಿಸಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂಬ ರಾಜ್ಯಪಾಲರ ಶಿಫಾರಸು ತಿರಸ್ಕೃತಗೊಂಡಿದ್ದರಿಂದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ನೆಮ್ಮದಿಯ ನಿಟ್ಟುಸಿರು ಬಿಟ್ಟು ಸಂಭ್ರಮಾಚರಣೆಯಲ್ಲಿ ತೊಡಗಿಸಿಕೊಂಡರು.

ಸೋಮವಾರ ಸಂಜೆ ದೆಹಲಿಯಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಾಪಸಾಗುವ ವೇಳೆ ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಮುಖಂಡರು ಹಾಗೂ ಕಾರ್ಯಕರ್ತರ ದಂಡೇ ಜಮಾಯಿಸಿತ್ತು¤. ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್‌.ಈಶ್ವರಪ್ಪ ಸೇರಿದಂತೆ ಅನೇಕ ಸಚಿವರು ಹಾಗೂ ಶಾಸಕರು ತಮ್ಮ ನಾಯಕ ಯಡಿಯೂರಪ್ಪ ಅವರ ಸ್ವಾಗತಕ್ಕಾಗಿ ಆಗಮಿಸಿದ್ದರು. ಈ ಸಂದರ್ಭ ಡೊಳ್ಳು ಕುಣಿತ ಮತ್ತಿತರ ಜಾನಪದ ಕಲಾವಿದರು ವಾತಾವರಣಕ್ಕೆ ಮೆರಗು ತಂದರು.

http://www.udayavani.com/news/70676L15-%E0%B2%AC-%E0%B2%9C-%E0%B2%AA-%E0%B2%AF%E0%B2%B2-%E0%B2%B2–%E0%B2%B8-%E0%B2%AD-%E0%B2%B0%E0%B2%AE-%E0%B2%9A%E0%B2%B0%E0%B2%A3—%E0%B2%B8-%E0%B2%8E-%E0%B2%97–%E0%B2%85%E0%B2%A6-%E0%B2%A6-%E0%B2%B0–%E0%B2%B8-%E0%B2%B5-%E0%B2%97%E0%B2%A4.html

 

Leave a Reply