
ಚುನಾವಣಾ ನೀತಿ ಸಂಹಿತೆಯನ್ನು ತಾವು ಉಲ್ಲಂಘಿಸಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟ ಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಏರ್ಪಡಿಸಲಾಗಿದ್ದ ಸಭೆ ಚುನಾವಣಾ ಪ್ರಚಾರ ಸಮಿತಿ ಸಭೆಯಲ್ಲ .ಪಕ್ಷದ ಹಿತೈಷಿಗಳ ಸಭೆ ಹಾಗಾಗಿ ೧೦ ಗಂಟೆಯ ನಂತರ ಮಾತನಾಡಬಾರದು ಎಂಬ ನಿಯಮ ಇಲ್ಲಿ ಅನ್ವಯವಾಗುದಿಲ್ಲ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು .ಮುಂದೆ ಈ ರೀತಿಯ ಸಭೆಗಳು ವಿವಾದಕ್ಕೆ ಒಳಗಾಗದಂತೆ ಎಚ್ಚರಿಕೆ ವಹಿಸುದಾಗಿ ಅವರು ತಿಳಿಸಿದರು.