ಗುಲ್ಬರ್ಗ ಸಚಿವ ಸಂಪುಟ ಸಮ್ಮೇಳನದ ನಿರ್ಧಾರಗಳು

ಇಂದಿನ ಸಚಿವ ಸಂಪುಟದ ಸಭೆಯ ನಿರ್ಧಾರಗಳು
೧. ಇಂದಿನ ಸಚಿವ ಸಂಪುಟ ಸಭೆಯಲ್ಲಿ ಸುಮಾರು ೪೦ ವಿಷಯಗಳ ಬಗ್ಗೆ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಈ ಪೈಕಿ ೨೦ಕ್ಕೂ ಹೆಚ್ಚು ವಿಷಯಗಳು ಹಿಂದುಳಿದ ಗುಲ್ಬರ್ಗಾ ವಿಭಾಗಕ್ಕೆ ಅನ್ವಯಿಸುತ್ತವೆ. (ಸುಮಾರು ೯೦೦ ಕೋಟಿ ರೂ. ವೆಚ್ಚ)
೨. ಗುಲ್ಬರ್ಗಾ ವಿಭಾಗಕ್ಕೆ ಸಂಬಂಧಪಟ್ಟಂತೆ ಈ ಕೆಳಕಂಡ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.
೭.೧ ಬರಪರಿಹಾರಕ್ಕಾಗಿ ರೂ. ೩೦ ಕೋಟಿ ಹೆಚ್ಚುವರಿ ಅನುದಾನ :- ಗುಲ್ಬರ್ಗಾ ವಿಭಾಗದ ೫ ಜಿಲ್ಲೆಗಳ ೩೦ ತಾಲ್ಲೂಕುಗಳು ಬರಪೀಡಿತವಾಗಿದ್ದು ಮೊನ್ನೆತಾನೆ ಕೇಂದ್ರ ಅಧ್ಯಯನ ತಂಡ ಬರಪೀಡಿತ ಕೆಲವು ಗ್ರಾಮಗಳಿಗೆ ಭೇಟಿ ನೀಡಿರುತ್ತದೆ. ನಿನ್ನೆ ತಾನೆ ನಾನೂ ಸಹ ಬೀದರ್ ಜಿಲ್ಲೆಯ ಕೆಲವು ಗ್ರಾಮಗಳಿಗೆ ಭೇಟಿ ನೀಡಿದ್ದೆ. ನಮ್ಮ ಕಂದಾಯ ಸಚಿವರು ಹಾಗೂ ಜಿಲ್ಲಾ ಸಚಿವರುಗಳೂ ಸಹ ಬರಪೀಡಿತ ಪ್ರದೇಶಗಳಲ್ಲಿ ಪ್ರವಾಸ ಮಾಡಿ ಬಂದಿರುತ್ತಾರೆ. ಕೇಂದ್ರದ ಅನುದಾನಕ್ಕೆ ಕಾಯದೆ ನಾವು ಈಗಾಗಲೇ ಎಲ್ಲಾ ೨೦ ಬರಪೀಡಿತ ಜಿಲ್ಲೆಗಳಿಗೂ ಸರಾಸರಿ ೩ ರಿಂದ ೫ ಕೋಟಿ ರೂ. ಅನುದಾನ ಒದಗಿಸಿ ಪರಿಹಾರ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ. ಇಂದು ವಿಶೇಷವಾಗಿ ಗುಲ್ಬರ್ಗಾ ವಿಭಾಗದ ಬರಪೀಡಿತ ತಾಲ್ಲೂಕುಗಳಲ್ಲಿ ಬರ ಪರಿಹಾರಕ್ಕಾಗಿ ರೂ. ೩೦ ಕೋಟಿ ಹೆಚ್ಚುವರಿ ಅನುದಾನ ಒದಗಿಸಲು ಆದೇಶಿಸಲಾಗಿದೆ. ಒಟ್ಟಿನಲ್ಲಿ ನಮ್ಮ ಸರ್ಕಾರ ಬರಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಗಳಿಗಾಗಿ ಹಣದ ಕೊರತೆ ಇಲ್ಲದಂತೆ ನೋಡಿಕೊಳ್ಳಲು ಕಟಿಬದ್ಧವಾಗಿದೆ.
೭.೨ ಬರಪೀಡಿತ ಗ್ರಾಮಗಳಿಗೆ ತಕ್ಷಣ ಕುಡಿಯುವ ನೀರಿನ ವ್ಯವಸ್ಥೆ :- ಗುಲ್ಬರ್ಗಾ ವಿಭಾಗದ ಬಹಳಷ್ಟು ತಾಲ್ಲೂಕುಗಳು ಬರಪೀಡಿತವಾಗಿದ್ದು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಲ್ಲಿ ತಕ್ಷಣ ಕೊಳವೆ ಬಾವಿಗಳನ್ನು ಕೊರೆದು ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ತಕ್ಷಣ ೫೦೦ ಗ್ರಾಮಗಳಲ್ಲಿ ಕೊಳವೆ ಬಾವಿ ಕೊರೆಯಿಸಲು ಅನುಮೋದನೆ ನೀಡಲಾಗಿದೆ. ಆಗಾಗ ಪರಿಶೀಲನೆ ಮಾಡಿ ಅಗತ್ಯವಿರುವೆಡೆ ಹೆಚ್ಚುವರಿ ಕುಡಿಯುವ ನೀರಿನ ಕಾಮಗಾರಿ ತೆಗೆದುಕೊಳ್ಳಲೂ ಸಹ ಆದೇಶ ನೀಡಲಾಗಿದೆ.
೭.೩ ನೂತನ ಜಿಲ್ಲೆಯಾಗಿ ಯಾದಗೀರ್ :- ಈ ಹಿಂದಿನ ಸಚಿವ ಸಂಪುಟದಲ್ಲಿ ಯಾದಗೀರ್ನ್ನು ನೂತನ ಜಿಲ್ಲೆಯಾಗಿ ಘೋಷಿಸಲಾಗಿತ್ತು. ಅದಕ್ಕಾಗಿ ರಚಿಸಲಾಗಿದ್ದ ಸಚಿವ ಸಂಪುಟದ ಉಪ ಸಮಿತಿಯ ಶಿಫಾರಸ್ಸಿನ ಅನ್ವಯ ಈಗಿರುವ ಯಾದಗೀರ್ ಉಪ ವಿಭಾಗದ ಯಾದಗೀರ್, ಷಹಪುರ ಮತ್ತು ಸುರಪುರ ತಾಲ್ಲೂಕುಗಳನ್ನು ಒಳಗೊಂಡಂತೆ ನೂತನ ಜಿಲ್ಲೆಯನ್ನು ರಚಿಸಲು ಇಂದಿನ ಸಭೆಯಲ್ಲಿ ತೀರ್ಮಾನಿಸಲಾಯಿತು. ನೂತನ ಜಿಲ್ಲೆಯಲ್ಲಿ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗಾಗಿ ಮತ್ತು ನೂತನ ಕಚೇರಿಗಳ ಕಟ್ಟಡ ನಿರ್ಮಾಣಕ್ಕಾಗಿ ರೂ.೨೫ ಕೋಟಿ ಒದಗಿಸಲು ತೀರ್ಮಾನಿಸಲಾಯಿತು. ಯಾದಗೀರ್ ನೂತನ ಜಿಲ್ಲೆಯನ್ನು ಅಕ್ಟೋಬರ್ ೩೧ರಂದು ವಿದ್ಯುಕ್ತವಾಗಿ ಉದ್ಫಾಟಿಸಲಾಗುವುದು.
೭.೪ ಹೆಚ್ಕೆಡಿಬಿಗೆ ಹೆಚ್ಚುವರಿ ಅನುದಾನ :- ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಹೆಚ್ಚುವರಿ ಅನುದಾನ ಕೊಡಬೇಕೆಂದು ಬೇಡಿಕೆ ಇದ್ದು ಈ ಬೇಡಿಕೆಗೆ ಸ್ಪಂದಿಸಿ ಈಗಾಗಲೇ ಈ ಆರ್ಥಿಕ ವರ್ಷದಲ್ಲಿ ನೀಡಲಾದ ರೂ.೨೧ ಕೋಟಿ ಜೊತೆಗೆ ರೂ. ೧೦ ಕೋಟಿ ಹೆಚ್ಚುವರಿ ಅನುದಾನವನ್ನು ಒದಗಿಸಲು ಅನುಮೋದನೆ ನೀಡಲಾಯಿತು.
೭.೫ ಗುಲ್ಬರ್ಗಾ ವಿಭಾಗದ ನೀರಾವರಿ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಹೆಚ್ಚುವರಿ ಅನುದಾನ :- ಗುಲ್ಬರ್ಗಾ ಹಾಗೂ ಬೀದರ್ ಜಿಲ್ಲೆಗಳಲ್ಲಿ ಸುಮಾರು ವರ್ಷಗಳಿಂದ ಪೂರ್ಣಗೊಳಿಸಲಾದ ನೀರಾವರಿ ಯೋಜನೆಗಳು ನಾಲೆ ಮತ್ತು ಅಚ್ಚುಕಟ್ಟು ಪ್ರದೇಶಗಳ ಅಭಿವೃದ್ಧಿಯಾಗದೆ ರೈತರು ನೀರಾವರಿ ಸೌಲಭ್ಯದಿಂದ ವಂಚಿತರಾಗಿರುತ್ತಾರೆ. ಇದನ್ನು ಗಮನಿಸಿ ನಮ್ಮ ಸರ್ಕಾರ ಈ ಕೆಳಗಿನ ಯೋಜನೆಗಳಿಗೆ ರೂ.೩೫ ಕೋಟಿ ಹೆಚ್ಚುವರಿ ಅನುದಾನ ನೀಡಲು ನಿರ್ಧರಿಸಿದೆ.
೧. ಬೆಣ್ಣೆತೊರ ಯೋಜನೆ – ೧೦ ಕೋಟಿ ರೂ.
೨. ಕೆಳದಂಡೆ ಮುಲ್ಲಾಮಾರಿ ಯೋಜನೆ – ೧೦ ಕೋಟಿ ರೂ.
೩. ಅಮರ್ಜಾ ಯೋಜನೆ – ೧೦ ಕೋಟಿ ರೂ.
೪. ಚುಲ್ಕಿ ನಾಲಾ ಯೋಜನೆ – ೫ ಕೋಟಿ ರೂ.

ಈ ಯೋಜನೆಗಳ ಅನುಷ್ಠಾನದಿಂದ ಸುಮಾರು ೧೦ ಸಾವಿರ ಹೆಕ್ಟೇರ್ ಜಮೀನಿಗೆ ಈ ವರ್ಷದ ಅಂತ್ಯಕ್ಕೆ ನೀರಾವರಿ ಸೌಲಭ್ಯ ಒದಗಿಸಲು ಸಾಧ್ಯವಾಗುತ್ತದೆ.
೭.೬ ಫೀಡರ್ ಲೈನ್ :- ಗುಲ್ಬರ್ಗಾ ಜಿಲ್ಲೆ ಸೇಡಂ ತಾಲ್ಲೂಕಿನ ಲಾಹೋರ ಬಿಸಿಬಿ ಇಂದ ಚಿತ್ತಾಪುರ ತಾಲ್ಲೂಕಿನ ಇಂಗಳಗಿ ಬಿಸಿಬಿ ವರೆಗೆ ಕಾಗಿನಾ ನದಿ ಎರಡೂ ದಂಡೆಗಳು ಸೇರಿ ೧೪೦ ಕಿ.ಮೀ ಉದ್ದದ ಎಕ್ಸ್ಪ್ರೆಸ್ ಫೀಡರ್ ಲೈನ್ ಕಾಮಗಾರಿಗಳ ಅಂದಾಜು ಮೊತ್ತ ೧೧.೨೦ ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.
೭.೭ ಮಲ್ಲಾಬಾದ್ ಏತ ನೀರಾವರಿ :- ೧೦,೬೦೦ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಮಲ್ಲಾಬಾದ್ ಏತ ನೀರಾವರಿ ಯೋಜನೆಯ ಅಂಗವಾದ ಬಳಬಟ್ಟಿ ಏತ ನೀರಾವರಿ ಹೆಡ್ವರ್ಕ್ಸ್ ಕಾಮಗಾರಿಗಳ ೧೯ ಕೋಟಿ ರೂ. ಅಂದಾಜು ವೆಚ್ಚಕ್ಕೆ ಅನುಮೋದನೆ ನೀಡಲಾಯಿತು.
೭.೮ ಸಣ್ಣ ನೀರಾವರಿ ಕೆರೆ ನಿರ್ಮಾಣ:- ಬೀದರ್ ಜಿಲ್ಲೆ ಔರಾದ್ ತಾಲ್ಲೂಕಿನ ಆಲೂರು-ಬೇಲೂರು ಸಣ್ಣ ನೀರಾವರಿ ಕೆರೆ ನಿರ್ಮಾಣ ಸಂಬಂಧದ ಕಾಮಗಾರಿಗಳ ಪರಿಷ್ಕೃತ ಅಂದಾಜು ೧೪.೯೪ ಕೋಟಿ ರೂ.ಗಳಿಗೆ ಆಡಡಳಿತಾತ್ಮಕ ಮಂಜೂರಾತಿ ನೀಡಲಾಯಿತು.
೭.೮ ಗಂಡೋರಿನಾಲಾ ಜಲಾಶಯವನ್ನು “ದಿವಂಗತ ಚಂದ್ರಶೇಖರ ಪಾಟೀಲ ಮಹಾಗಾಂವ ಜಲಾಶಯ” ಎಂದು ನಾಮಕರಣ ಮಾಡಲು ಸಚಿವ ಸಂಪುಟ ಅನುಮೋದನೆ ನೀಡಿತು. ಈ ಮೂಲಕ ಹೈದ್ರಾಬಾದ್-ಕರ್ನಾಟಕದ ಸ್ವತಂತ್ರ ಹೋರಾಟಗಾರ ಮತ್ತು ಹಲವು ನೀರಾವರಿ ಯೋಜನೆಗಳ ರೂವಾರಿ ಚಂದ್ರಶೇಖರ ಪಾಟೀಲರಿಗೆ ಗೌರವ ಸಲ್ಲಿಸಲಾಗಿದೆ.
೭.೮ ಇನ್ನೂ ೨೦೦ ಹೆಚ್ಚುವರಿ ಸುವರ್ಣ ಗ್ರಾಮಗಳು :- ಗುಲ್ಬರ್ಗಾ ವಿಭಾಗಕ್ಕೆ ವಿಶೇಷವಾಗಿ ಕಳೆದ ವರ್ಷದ ಸಚಿವ ಸಂಪುಟ ಸಭೆಯಲ್ಲಿ ೨೨೨ ಗ್ರಾಮಗಳನ್ನು ಸುವರ್ಣಗ್ರಾಮ ಯೋಜನೆಯಡಿ ಮಂಜೂರು ಮಾಡಲಾಗಿತ್ತು. ಜೊತೆಗೆ ಇಡೀ ರಾಜ್ಯಕ್ಕೆ ೩ನೇ ಹಂತದಲ್ಲಿ ಮಂಜೂರು ಮಾಡಲಾಗಿದ್ದ ೧೪೯೧ ಗ್ರಾಮಗಳ ಪೈಕಿ ಗುಲ್ಬರ್ಗಾ ವಿಭಾಗದ ೨೭೭ ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಇದಲ್ಲದೆ ಈ ದಿನ ಮತ್ತೇ ಗುಲ್ಬರ್ಗಾ ವಿಭಾಗದಲ್ಲಿ ೨೦೦ ಹೆಚ್ಚುವರಿ ಗ್ರಾಮಗಳನ್ನು ಸುವರ್ಣ ಗ್ರಾಮೋದಯ ಯೋಜನೆಯ ೪ನೇ ಹಂತದಲ್ಲಿ ಮಂಜೂರು ಮಾಡಲು ತೀರ್ಮಾನಿಸಲಾಯಿತು.

೭.೯ ಜುರಾಲ ಯೋಜನೆಯಿಂದ ಬಾಧಿತವಾದ ಗ್ರಾಮಗಳಿಗೆ ಸೇತುವೆ :- ಪ್ರಿಯದರ್ಶಿನಿ-ಜುರಾಲ ಯೋಜನೆಯಡಿಯಲ್ಲಿ ಬಾಧಿತವಾದ ರಾಯಚೂರು ಜಿಲ್ಲೆಯ ಡೊಂಗರಾಂಪುರ ಮತ್ತು ಕುರ್ವಾಖುರ್ದ್ ಸೆತುವೆ ನಿರ್ಮಾಣಕ್ಕೆ ರೂ. ೫.೬೨ ಕೋಟಿ ಮತ್ತು ಅತ್ಕೂರು ಹಾಗೂ ಕುರ್ವಾಕಲಾ ನಡುಗಡ್ಡೆ ಮದ್ಯೆ ಸೇತುವೆ ನಿರ್ಮಾಣಕ್ಕೆ ರೂ. ೧೦.೬೦ ಕೋಟಿ ವೆಚ್ಚದಲ್ಲಿ ಅನುಮೋದನೆ ನೀಡಲಾಯಿತು.
೭.೧೦ ಗುಲ್ಬರ್ಗಾ ವಿಭಾಗಕ್ಕೆ ೧೦೦೦ ಅಂಗನವಾಡಿ ಕಟ್ಟಡಗಳು:- ಗುಲ್ಬರ್ಗಾ ವಿಭಾಗದಲ್ಲಿರುವ ಸುಮಾರು ೧೦,೫೦೦ ಅಂಗನವಾಡಿಗಳ ಪೈಕಿ ೪,೭೨೫ ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿರುವುದಿಲ್ಲ. ಕಾರಣ ಈ ವಿಭಾಗಕ್ಕೆ ವಿಶೇಷವಾಗಿ ಇದೇ ವರ್ಷ ೧,೦೦೦ ಅಂಗನವಾಡಿ ಕಟ್ಟಡಗಳಿಗೆ ತಲಾ ರೂ. ೩.೭ ಲಕ್ಷದಂತೆ ಒಟ್ಟು ರೂ. ೩೭ ಕೋಟಿ ಹೆಚ್ಚುವರಿ ಅನುದಾನ ಒದಗಿಸಲು ನಿರ್ಧರಿಸಲಾಯಿತು.
೭.೧೧ ಬತ್ತಿಹೋದ ಬಾವಿಗಳಿಗೆ ಮರುಜೀವ :- ಜಲಾನಯನ ಅಭಿವೃದ್ಧಿ ವಿಶೇಷ ಯೋಜನೆಯಡಿ ಹಿಂದುಳಿದ ೧೧೪ ತಾಲ್ಲೂಕುಗಳಲ್ಲಿ ಬತ್ತಿಹೋದ ಬಾವಿಗಳ ಮರುಪೂರಣ ಯೋಜನೆಗೆ ರೂ.೨೦ ಕೋಟಿ ಮಂಜೂರು ಮಾಡಲಾಯಿತು. ಇದರಿಂದ ಪ್ರಮುಖವಾಗಿ ಗುಲ್ಬರ್ಗಾ ವಿಭಾಗದ ಹಿಂದುಳಿದ ಎಲ್ಲಾ ತಾಲ್ಲೂಕುಗಳು ಲಾಭ ಪಡೆಯಲಿವೆ.
೭.೧೨ ಗುಲ್ಬರ್ಗಾ ವಿಭಾಗದ ೨೪೨ ಗ್ರಾಮಗಳಿಗೆ ವಿಶೇಷ ಕುಡಿಯುವ ನೀರು ಯೋಜನೆ:- ಫ್ಲೋರೈಡ್, ನೈಟ್ರೇಟ್, ಕಬ್ಬಿಣಾಂಶ ಇತ್ಯಾದಿ ಸಮಸ್ಯೆಗಳಿಂದ ಬಳಲುತ್ತಿರುವ ಗುಲ್ಬರ್ಗಾ ವಿಭಾಗದ ೨೪೨ ಸಮಸ್ಯಾತ್ಮಕ ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನಕ್ಕಾಗಿ ೩೩ ಬಹುಗ್ರಾಮ ಯೋಜನೆಗಳಿಗೆ ಮಂಜೂರಾತಿ ನೀಡಲಾಯಿತು. ಇದಕ್ಕಾಗಿ ರೂ.೧೬೬ ಕೋಟಿ ಒದಗಿಸಲಾಗುವುದು. ಇದೇ ವರ್ಷ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು.
೭.೧೩ ಹೆಚ್ಚುವರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು :- ಈಗ ಗುಲ್ಬರ್ಗಾ ವಿಭಾಗದಲ್ಲಿ ೮೭ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿದ್ದು ಈ ವರ್ಷ ೨೮ ಕಿತ್ತೂರು ರಾಣ ಚೆನ್ನಮ್ಮ ವಸತಿ ಶಾಲೆಗಳನ್ನು ಪ್ರಾರಂಭಿಸಲು ಅನುಮೋದನೆ ನೀಡಲಾಗಿದೆ. ಈ ವಿಭಾಗವು ಶೈಕ್ಷಣಕವಾಗಿ ಹಿಂದುಳಿದಿರುವ ಕಾರಣ ಮತ್ತೆ ಹೆಚ್ಚುವರಿಯಾಗಿ ೧೪ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಮುಂದಿನ ಶೈಕ್ಷಣಕ ವರ್ಷದಿಂದ ಪ್ರಾರಂಭಿಸಲು ನಿರ್ಧರಿಸಲಾಯಿತು. (ಗುಲ್ಬರ್ಗಾ-೪, ಬಳ್ಳಾರಿ-೪, ಬೀದರ್-೩, ರಾಯಚೂರು-೨, ಕೊಪ್ಪಳ-೧). ಇದಕ್ಕಾಗಿ ಪ್ರತಿ ಶಾಲೆಗೆ ಪ್ರತಿ ವರ್ಷ ರೂ.೫೦ ಲಕ್ಷ ವೆಚ್ಚ ಮಾಡಲಾಗುವುದು.
೭.೧೪ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮೇಲ್ದರ್ಜೆಗೆ :- ಗುಲ್ಬರ್ಗಾ ವಿಭಾಗದ ೧೨೮ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಹಗಲು-ರಾತ್ರಿ (೨೪/೭) ನಿರಂತರ ಕಾರ್ಯನಿರ್ವಹಿಸುವಂತೆ ಸಜ್ಜುಗೊಳಿಸಲು ೬ ಕೋಟಿ ರೂ.ಗಳನ್ನು ಒದಗಿಸಲು ಸಚಿವ ಸಂಪುಟ ಅನುಮೋದನೆ ನೀಡಿತು. ಈ ಹಣವನ್ನು ಎನ್ಆರ್ಹೆಚ್ಎಂ ಯೋಜನೆಯಿಂದ ಒದಗಿಸಲಾಗುವುದು.
೭.೧೫ ಬೀದರ್ ಪಾಲಿಟೆಕ್ನಿಕ್ಗೆ ೧೦ ಕೋಟಿ ರೂ.:- ಬೀದರ್ನಲ್ಲಿ ಪಾಲಿಟೆಕ್ನಿಕ್ ಕಾಲೇಜಿಗೆ ನೂತನ ಕಟ್ಟಡ ನಿರ್ಮಿಸಲು ೧೦ ಕೋಟಿ ರೂ. ಮಂಜೂರು ಮಾಡಲು ಸಚಿವ ಸಂಪುಟ ಅನುಮೋದನೆ ನೀಡಿತು.
೭.೧೬ ಕಾಲೇಜುಗಳಲ್ಲಿ ವಿಜ್ಞಾನ ವಿಭಾಗ ಮತ್ತು ಮೂಲಸೌಕರ್ಯ ಅಭಿವೃದ್ಧಿ:- ರಾಜ್ಯದ ಅತ್ಯಂತ ಹಿಂದುಳಿದ ೩೯ ತಾಲ್ಲೂಕುಗಳಲ್ಲಿ ವಿಜ್ಞಾನ ವಿಭಾಗ ಇಲ್ಲದಿರುವ ಕಾಲೇಜುಗಳಲ್ಲಿ ವಿಜ್ಞಾನ ವಿಭಾಗ ತೆರೆಯಲು ೩ ಕೋಟಿ ರೂ. ಹಾಗೂ ೬೦ ಕಾಲೇಜುಗಳ ಮೂಲ ಸೌಲಭ್ಯ ಸುಧಾರಣೆಗೆ ತಲಾ ೫ ಲಕ್ಷ ರೂ.ಗಳಂತೆ ೩ ಕೋಟಿ ರೂ. ಸೇರಿ ಒಟ್ಟು ೬ ಕೋಟಿ ರೂ.ಗಳನ್ನು ಒದಗಿಸಲು ನಿರ್ಧರಿಸಲಾಯಿತು.
೭.೧೭ ವಿಜ್ಞಾನ ಬೋಧನೆಗೆ ಆದ್ಯತೆ :- ಗುಲ್ಬರ್ಗಾ ವಿಭಾಗದ ೪೯ ವಿಜ್ಞಾನ ವಿಭಾಗ ಹೊಂದಿರುವ ಪದವಿಪೂರ್ವ ಕಾಲೇಜುಗಳಲ್ಲಿ ಮೂಲಭೂತ ಸೌಲಭ್ಯ ಒದಗಿಸಲು ರೂ.೮.೧೭ ಕೋಟಿ ಹೆಚ್ಚುವರಿ ಅನುದಾನ ಒದಗಿಸಲು ತೀರ್ಮಾನಿಸಲಾಯಿತು.
೭.೧೮ ಮರ್ತೂರಿನಲ್ಲಿ ಸರ್ಕಾರಿ ಕಾನೂನು ಕಾಲೇಜು :- ಗುಲ್ಬರ್ಗಾ ಜಿಲ್ಲೆ ಮರ್ತೂರು ಗ್ರಾಮದಲ್ಲಿ ಹೊಸ ಸರ್ಕಾರಿ ಕಾನೂನು ಕಾಲೇಜನ್ನು ಸ್ಥಾಪಿಸಿ “ವಿಜ್ಞಾನೇಶ್ವರ ಸರ್ಕಾರಿ ಕಾನೂನು ಕಾಲೇಜು” ಎಂದು ನಾಮಕರಣ ಮಾಡಲು ಸಚಿವ ಸಂಪುಟ ಅನುಮೋದನೆ ನೀಡಿದೆ.
೭.೧೯ ಹೆಚ್ಚುವರಿ ವಸತಿ ನಿಲಯಗಳು :- ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡ, ಹಿಂದುಳಿದ ವರ್ಗಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ವಸತಿ ಸೌಕರ್ಯ ಕಲ್ಪಿಸಲು ನಮ್ಮ ಸರ್ಕಾರ ಬದ್ಧವಾಗಿದ್ದು ಗುಲ್ಬರ್ಗಾ ವಿಭಾಗದಲ್ಲಿ ವಿಶೇಷವಾಗಿ ೪೪ ಹೆಚ್ಚುವರಿ ವಿದ್ಯಾರ್ಥಿ ನಿಲಯಗಳನ್ನು ಹೊಸದಾಗಿ ಪ್ರಾರಂಭಿಸಲು ನಿರ್ಧರಿಸಲಾಯಿತು. ಈ ಪೈಕಿ ೨೪ ಬಾಲಕಿಯರ ವಿದ್ಯಾರ್ಥಿ ನಿಲಯಗಳು ಮತ್ತು ೨೦ ಬಾಲಕರ ವಿದ್ಯಾರ್ಥಿ ನಿಲಯಗಳು ಸೇರಿರುತ್ತವೆ. (ಇದರಲ್ಲಿ ೩೦ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳು ಮತ್ತು ೧೪ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳು).
೭.೨೦ ಗುಲ್ಬರ್ಗಾದಲ್ಲಿ ಆಪೆರಲ್ ಪಾರ್ಕ್ :- ಗುಲ್ಬರ್ಗಾ ಜಿಲ್ಲೆಯಲ್ಲಿ ಸುವರ್ಣ ವಸ್ತ್ರ ನೀತಿ ಪ್ರಕಾರ ಆಪೆರಲ್ ಪಾರ್ಕ್ ಸ್ಥಾಪಿಸಲು ಉತ್ತಮ ಅವಕಾಶಗಳಿದ್ದು ಇದಕ್ಕಾಗಿ ೧೦ ಕೋಟಿ ರೂ. ಅನುದಾನ ಮಂಜೂರು ಮಾಡಲಾಯಿತು.
೭.೨೧ ಬೆಂಗಳೂರು ಒನ್ ಮಾದರಿ ಕೇಂದ್ರ :- ನಾಗರೀಕರಿಗೆ ಒಂದೇ ನೆಲೆಯಲ್ಲಿ ವಿವಿಧ ಸೌಲಭ್ಯ/ಸೌಕರ್ಯಗಳನ್ನು ಒದಗಿಸುವ ಬೆಂಗಳೂರು-೧ ಮಾದರಿಯನ್ನು ಗುಲ್ಬರ್ಗಾ ವಿಭಾಗದ ಬೀದರ್, ರಾಯಚೂರು, ಕೊಪ್ಪಳ ಮತ್ತು ಹೊಸಪೇಟೆ ನಗರಗಳಿಗೆ ಹಂತ ಹಂತವಾಗಿ ವಿಸ್ತರಿಸಲು ನಿರ್ಧರಿಸಲಾಯಿತು.
೭.೨೨ ಈಗಾಗಲೇ ಗುಲ್ಬರ್ಗಾ ಮತ್ತು ಬಳ್ಳಾರಿ ನಗರಗಳಲ್ಲಿ ಈ ಸೇವಾ ಕೇಂದ್ರಗಳನ್ನು ಪ್ರಾರಂಭಿಸುವ ನಿರ್ಧಾರ ಕೈಗೊಳ್ಳಲಾಗಿದ್ದು ಸಚಿವ ಸಂಪುಟ ಅದಕ್ಕೆ ಅನುಮೋದನೆ ನೀಡಿತು.
೭.೨೩ ಡಾ: ಬಾಬು ಜಗಜೀವನರಾಂ ಸ್ಮಾರಕ:- ಗುಲ್ಬರ್ಗಾ ನಗರದಲ್ಲಿ ಡಾ: ಬಾಬು ಜಗಜೀವನರಾಂ ಸ್ಮಾರಕ ನಿರ್ಮಾಣಕ್ಕೆ ೩ ಕೋಟಿ ರೂ. ಮಂಜೂರು ಮಾಡಲಾಯಿತು.
೭.೨೪ ಅಂಬಿಗರ ಚೌಡಯ್ಯ ಸ್ಮಾರಕ:- ಗುಲ್ಬರ್ಗಾದಲ್ಲಿ ಶಿವಶರಣ ಅಂಬಿಗರ ಚೌಡಯ್ಯ ಸ್ಮಾರಕ ನಿರ್ಮಾಣಕ್ಕೆ ೨ ಕೋಟಿ ರೂ.
೭.೨೫ ಸುರಪುರದಲ್ಲಿ ಶಿವಶರಣ ದೇವರ ದಾಸಿಮಯ್ಯ ಸ್ಮಾರಕ :- ಗುಲ್ಬರ್ಗಾ ಜಿಲ್ಲೆ ಸುರಪುರದಲ್ಲಿ ಶಿವಶರಣ ದೇವರ ದಾಸಿಮಯ್ಯ ಸ್ಮಾರಕ ಭವನ ನಿರ್ಮಾಣಕ್ಕೆ ೧ ಕೋಟಿ ರೂ.
೭.೨೬ ಅನುಭವ ಮಂಟಪ:- ಗುಲ್ಬರ್ಗಾ ನಗರದಲ್ಲಿ ಬಸವ ಸಮಿತಿ ವತಿಯಿಂದ ಅನುಭವ ಮಂಟಪ ನಿರ್ಮಾಣಕ್ಕೆ ೧ ಕೋಟಿ ರೂ.
೭.೨೭ ದೇವಳ ಗಣಗಾಪುರ ದತ್ತಾತ್ರೇಯ ಅಭಿವೃದ್ಧಿಗೆ ೩ ಕೋಟಿ ರೂ. ಒದಗಿಸಲು ಸಚಿವ ಸಂಪುಟ ಅನುಮೋದನೆ ನೀಡಿತು.
೮. ಒಳಚರಂಡಿ ವ್ಯವಸ್ಥೆ:- ಹರಪ್ಪನಹಳ್ಳಿ ಪಟ್ಟಣಕ್ಕೆ ೨೯.೫೦ ಕೋಟಿ ರೂ. ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸುವ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.
೯. ವಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪv:- ಬಳ್ಳಾರಿಯ ವಿಮ್ಸ್ (ವಿಜಯನಗರ ವೈದ್ಯಕೀಯ ಮಹಾವಿದ್ಯಾಲಯ) ಸಂಸ್ಥೆಯನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಅಭಿವೃದ್ಧಿಪಡಿಸಲು ಸಚಿವ ಸಂಪುಟ ಅನುಮೋದಿಸಿತು.
೧೦. ಬಳ್ಳಾರಿ ಜಿಲ್ಲಾ ಕಚೇರಿ ಸಂಕೀರ್ಣ:- ಬಳ್ಳಾರಿ ಜಿಲ್ಲಾ ಕಚೇರಿ ಸಂಕೀರ್ಣ ನಿರ್ಮಿಸಲು ಸಚಿವ ಸಂಪುಟ ಅನುಮೋದನೆ ನೀಡಿತು. (ಅಂದಾಜು ೨೦ ಕೋಟಿ ರೂ. ವೆಚ್ಚದಲ್ಲಿ)
೧೧. ಹಂಪಿ:- ವಿಶ್ವಪರಂಪರ ಕೇಂದ್ರವಾದ ಹಂಪಿ ಪ್ರದೇಶವನ್ನು ಪ್ರವಾಸಿ ತಾಣವನ್ನಾಗಿ ೮೧.೯೧ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿತು. ಈ ಒಟ್ಟು ಮೊತ್ತದಲ್ಲಿ ಕೇಂದ್ರ ಸರ್ಕಾರ ೩೨.೮೩ ಕೋಟಿ ಹಣ ಒದಗಿಸುತ್ತಿದ್ದು ರಾಜ್ಯ ೪೯.೦೮ ಕೋಟಿ ರೂ.ಗಳನ್ನು ಭರಿಸಲಿದೆ.
೧೨. ಸೈಜಿಂಗ್ ಘಟಕ :- ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿಯಲ್ಲಿ ೪.೮೨ ಕೋಟಿ ರೂ. ವೆಚ್ಚದಲ್ಲಿ ಸೈಜಿಂಗ್ ಘಟಕ ಸ್ಥಾಪಿಸಲು ನಿರ್ಧರಿಸಲಾಯಿತು.
೧೩. ಪದ್ಮಶ್ರೇಣ ಪ್ರಶಸ್ತಿ:- ೨೦೧೦ನೇ ಸಾಲಿನ ಗಣರಾಜ್ಯೋತ್ಸವ ದಿನದಂದು ಕೇಂದ್ರ ಸರ್ಕಾರ ನೀಡಲಿರುವ ಪದ್ಮ ಶ್ರೇಣಿಯ ಪ್ರಶಸ್ತಿಗಳಿಗಾಗಿ ರಾಜ್ಯದಿಂದ ಅರ್ಹ ವ್ಯಕ್ತಿಗಳನ್ನು ಶಿಫಾರಸ್ಸು ಮಾಡಲು ಸಚಿವ ಸಂಪುಟವು ಸಚಿವ ಸಂಪುಟ ಮುಖ್ಯಮಂತ್ರಿಗಳಿಗೆ ಅಧಿಕಾರ ನೀಡಿತು.
೧೪. ಇಎಸ್ಐ :- ಗುಲ್ಬರ್ಗಾದಲ್ಲಿ ಸೂಪರ್ ಸ್ಪೆಷಾಲಿಟಿ ಇ.ಎಸ್.ಐ. ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜ್ನ್ನು ಸ್ಥಾಪಿಸಲು ಗುಲ್ಬರ್ಗಾ ವಿಶ್ವವಿದ್ಯಾಲಯಕ್ಕೆ ಸೇರಿದ ೩೦ ಎಕರೆ ಜಮೀನನ್ನು ಗುತ್ತಿಗೆ ಕರಾರು ಒಪ್ಪಂದದ ಆಧಾರದ ಮೇಲೆ ನವದೆಹಲಿಯ
೧೫. ಗುಲ್ಬರ್ಗಾದ ಜಿಲ್ಲಾಸ್ಪತ್ರೆಯನ್ನು ನಿರ್ಮಿಸಲು ಪರಿಷ್ಕೃತ ಅಂದಾಜು ೪೭.೬೪ ಕೋಟಿ ರೂ. ಮತ್ತು ಚಾಮರಾಜನಗರ ಜಿಲ್ಲಾಸ್ಪತ್ರೆ ನಿರ್ಮಾಣದ ಪರಿಷ್ಕೃತ ಅಂದಾಜು ೧೧.೯೪ ಕೋಟಿ ರೂ. ವೆಚ್ಚ ಮಾಡಲು ಸಚಿವ ಸಂಪುಟ ಅನುಮೋದನೆ ನೀಡಿತು.
೧೬. ಜಲವಿದ್ಯುತ್ ಯೋಜನೆ:- ಜುರಾಲ ಜಲ ವಿದ್ಯುತ್ ಯೋಜನೆಯನ್ನು ಆಂಧ್ರದೊಂದಿಗೆ ಜಂಟಿಯಾಗಿ ಕೈಗೊಂಡಿದ್ದು ಇದಕ್ಕೆ ೧೪೩ ಕೋಟಿ ರೂ. ವೆಚ್ಚವಾಗಲಿದೆ. ಇದರಲ್ಲಿ ಅರ್ಧದಷ್ಟು ವೆಚ್ಚ ಅಂದರೆ ಸುಮಾರು ೭೦ ಕೋಟಿ ರೂ.ಗಳನ್ನು ರಾಜ್ಯದಿಂದ ಭರಿಸಲಾಗುವುದು. ಈ ಯೋಜನೆಯಡಿ ರಾಜ್ಯಕ್ಕೆ ವಾರ್ಷಿಕ ೧೮೨ ದಶಲಕ್ಷ ಯೂನಿಟ್ ವಿದ್ಯುತ್ ಪ್ರತಿ ಯೂನಿಟ್ಗೆ ರೂ.೨.೧೮ರ ದರದಲ್ಲಿ ದೊರೆಯಲಿದೆ. ಸಚಿವ ಸಂಪುಟ ಇದಕ್ಕೆ ಅನುಮೋದನೆ ನೀಡಿದೆ.
೧೭. ಡಾ. ಡಿ.ಎಂ. ನಂಜುಂಡಪ್ಪ ಸಮಿತಿಃ- ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಡಾ. ಡಿ.ಎಂ. ನಂಜುಂಡಪ್ಪ ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ ಉನ್ನತಮಟ್ಟದ ಸಮಿತಿಯ ಶಿಫಾರಸ್ಸುಗಳನ್ನು ಅನುಷ್ಠಾನ ಮಾಡುವಲ್ಲಿ ಈವರೆಗೆ ಆಗಿರುವ ಪ್ರಗತಿ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಪರಿಶೀಲನೆ ನಡೆಸಲಾಯಿತು.
ಡಾ. ಡಿ.ಎಂ. ನಂಜುಂಡಪ್ಪ ಸಮಿತಿ ಶಿಫಾರಸ್ಸುಗಳ ಜಾರಿಗೆ ೨೦೦೭-೦೮ರಲ್ಲಿ ೧೫೭೧.೫೦ ಕೋಟಿ ರೂ. ಹಣವನ್ನು ಬಜೆಟ್ನಲ್ಲಿ ಒದಗಿಸಿದ್ದು ೯೪೫.೯೯ ಕೋಟಿ. ರೂ.ಗಳ ವೆಚ್ಚವಾಗಿದೆ. ೨೦೦೮-೦೯ರಲ್ಲಿ ೨೫೪೭.೩೩ ಕೋಟಿ ರೂ. ಒದಗಿಸಿದ್ದು ೧೭೩೯.೪೧ ಕೋಟಿ ರೂ. ವೆಚ್ಚವಾಗಿದೆ. ಈ ವರ್ಷ (೨೦೦೯-೧೦) ೨೫೭೮.೮೩ ಕೋಟಿ ರೂ.ಗಳನ್ನು ಒದಗಿಸಲಾಗಿದ್ದು ಎಲ್ಲಾ ಇಲಾಖೆಗಳು ಕ್ರಿಯಾ ಯೋಜನೆಗಳನ್ನು ತಯಾರಿಸಿ ಅನುಷ್ಠಾನ ಪ್ರಾರಂಭಿಸಿವೆ.
ಕಳೆದ ವರ್ಷ ಗುಲ್ಬರ್ಗಾದಲ್ಲಿ ನಡೆದ ಸಚಿವ ಸಂಪುಟ ಸಭೆಯ ನಿರ್ಣಯದಂತೆ ವಿಧಾನಪರಿಷತ್ ಸದಸ್ಯರಾದ ಶ್ರೀ ಶಶೀಲ್ ನಮೋಶಿಯವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ಉನ್ನತ ಮಟ್ಟದ ಸಮಿತಿಯ ನಿರ್ದೇಶನದಂತೆ ಮಾದರಿ ಶಾಲೆಗಳ ನಿರ್ಮಾಣ, ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯ ಮಾದರಿಯಲ್ಲಿ ಶಾಲೆಗಳ ಸ್ಥಾಪನೆ, ಶಾಲೆಗಳಲ್ಲಿ ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆ ಉತ್ತಮ ಪಡಿಸುವುದು, ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮ,
೧೮. ಅಸೈಡ್ :- ಹುಬ್ಬಳ್ಳಿ ತಾಲ್ಲೂಕಿನ ಹುಬ್ಬಳ್ಳಿ-ಗೋಕುಲ ರಸ್ತೆಯನ್ನು ಅಸೈಡ್ ಯೋಜನೆಯಡಿ ಅಭಿವೃದ್ಧಿಪಡಿಸಲು ಕಾಮಗಾರಿಗಳ ಪುನರ್ ಪರಿಷ್ಕೃತ ಮೊತ್ತ ೧೭.೨೮ ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿ ಈ ಕಾಮಗಾರಿಗಳಿಗೆ ೭೧,೪೪,೬೫೯ ರೂ.ಗಳನ್ನು ಹೆಚ್ಚುವರಿಯಾಗಿ ಬಿಡುಗಡೆ ಮಾಡಲು ಅನುಮೋದನೆ ನೀಡಿತು.
೧೯. ಹಿಂದುಳಿದ ವರ್ಗಗಳಿಗೆ ಸಾಲ-ಸಹಾಯ ಧನಃ- ಹಿಂದುಳಿದ ವರ್ಗಗಳ ಸಾಂಪ್ರದಾಯಿಕ ವೃತ್ತಿಗಳನ್ನು ಅವಲಂಬಿಸಿರುವ ಕುಂಬಾರ, ಕಮ್ಮಾರ, ಮಡಿವಾಳ, ದೇವಾಂಗ ಮೊದಲಾದ ವೃತ್ತಿದಾರರ ಒಂದು ಲಕ್ಷ ಕುಟುಂಬಗಳಿಗೆ ಸಾಲ ಮತ್ತು ಸಹಾಯ ಧನ ಮಂಜೂರಾತಿ ಯೋಜನೆಗೆ ಸಚಿವ ಸಂಪುಟ ಇಂದು ಅನುಮೋದಿಸಿತು. ಈ ಉದ್ದೇಶಕ್ಕೆ ಆಯವ್ಯಯದಲ್ಲಿ ೧೦೦ ಕೋಟಿ ರೂ. ಹಣ ಒದಗಿಸಲಾಗಿದೆ. ಈ ಯೋಜನೆಯಡಿ ಪ್ರತಿ ಫಲಾನುಭವಿಗೆ ೫ ಸಾವಿರ ರೂ. ಸಹಾಯಧನ ಮತ್ತು ೫ ಸಾವಿರ ರೂ. ಸಾಲ (ವಾಣಜ್ಯ ಬ್ಯಾಂಕುಗಳು ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಮೂಲಕ) ಒದಗಿಸಲಾಗುವುದು.
೨೦. ಶಾಲೆಗೆ ಜಮೀನು:- ಹುಬ್ಬಳ್ಳಿಯ ಗೋಕುಲ ಗ್ರಾಮದ ರೀಸರ್ವೆ ನಂಬರ್ ೨/೩ರಲ್ಲಿನ ೨ ಎಕರೆ ೭ ಗುಂಟೆ ಜಮೀನನ್ನು ಪ್ರತಿ ಎಕರೆಗೆ ೧೮ ಸಾವಿರ ರೂ. ದರದಲ್ಲಿ ಪ್ರೌಢಶಾಲೆ ಮತ್ತು ಜೂನಿಯರ್ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಶಿಕ್ಷಣ ಇಲಾಖೆಗೆ ಮಂಜೂರು ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.
೨೧. ನಿವೇಶನಃ- ಹುಬ್ಬಳ್ಳಿಯ ನವನಗರದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯಕ್ಕೆ ೪೦ಘಿ೬೦ ಅಡಿ ಅಳತೆಯ ನಿವೇಶನವನ್ನು ಖರೀದಿ ಆಧಾರದ ಮೇಲೆ ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿತು.
೨೨. ಕೆರೆಗೆ ಜಮೀನು:- ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲ್ಲೂಕಿನ ಮಸ್ಕಿ ಗ್ರಾಮದ ಸರ್ವೆ ನಂ. ೨೦೮ ಮತ್ತು ೨೦೯ರಲ್ಲಿನ ಜಲಸಂಪನ್ಮೂಲ ಇಲಾಖೆಗೆ ಸೇರಿದ ೨೫೦ ಮೀಟರ್ ಘಿ ೨೭೦ ಮೀಟರ್ ವ್ಯಾಪ್ತಿ ಜಮೀನನ್ನು ಸಾರ್ವಜನಿಕ ಕುಡಿಯುವ ನೀರಿನ ಶೇಖರಣೆಗಾಗಿ ಕೆರೆ ನಿರ್ಮಿಸಲು ಗ್ರಾಮೀಣ ಮತ್ತು ಪಂಚಾಯತ್ ರಾಜ್ ಇಲಾಖೆಗೆ ವರ್ಗಾವಣೆ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿತು.
೨೩. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮೇಲ್ದರ್ಜೆಗೆ :- ಗುಲ್ಬರ್ಗಾ ವಿಭಾಗ ಆರೋಗ್ಯ ಕ್ಷೇತ್ರದಲ್ಲಿ ಹಿಂದುಳಿದಿದ್ದು ಈ ಭಾಗದ ಜನರಿಗೆ ಆರೋಗ್ಯ ಸೌಲಭ್ಯ ಹೆಚ್ಚಿಸಲು ಎಲ್ಲಾ ೩೪೩ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಹಗಲು-ರಾತ್ರಿ (೨೪/೭) ನಿರಂತರ ಕಾರ್ಯನಿರ್ವಹಿಸುವಂತೆ ಸಚಿವ ಸಂಪುಟ ನಿರ್ದೇಶನ ನೀಡಿದೆ.

Leave a Reply