ಕೃಷಿ

 • ರಾಜ್ಯದ ಸಮಗ್ರ ಅಭಿವೃದ್ದಿಗಾಗಿ ವಿಷನ್ ೨೦೨೦ ರೂಪಿಸಿದ ಮೊದಲ ರಾಜ್ಯ.
 • ಕೃಷಿ ಮತ್ತು ಗ್ರಾಮೀಣಾಭಿವೃದ್ದಿಗಾಗಿ ವಿಶೇಷ ವಿಧಾನಮಂಡಲದ ಅಧಿವೇಶನದಲ್ಲಿ ಪ್ರತ್ಯೇಕ ಕೃಷಿ ಬಜೆಟ್ ಮಂಡನೆ.
 • ಸಾವಯವ ಕೃಷಿ ಮಿಷನ್ ಸ್ಥಾಪಸಿ, ಅದರಡಿಯಲ್ಲಿ ೮೭ ಸಾವಿರ ರೈತ ಸದಸ್ಯರ ಸೇರ್ಪಡೆ.
 • ೨೦೦೮-೦೯ರ ಸಾವಯವ ಕೃಷಿಗೆ ೪೩.೩೯ ಕೋಟಿ ರೂ. ವೆಚ್ಚ ಮಾಡಿದ್ದು ೨೦೧೦-೧೧ನೇ ಸಾಲಿನಲ್ಲಿ ೧೦೦ ಕೋಟಿ, ೨೦೧೧-೧೨ನೇ ಸಾಲಿನಲ್ಲಿ ೧೦೦ ಕೋಟಿ ರೂ. ಮೀಸಲು.
 • ಕೃಷಿ ಅಧ್ಯಯನಕ್ಕಾಗಿ ರೈತರಿಗೆ ಚೀನ ಹಾಗೂ ಇಸ್ರೇಲ್ ಪ್ರವಾಸ.
 • ಸಹಕಾರ ಸಂಘಗಳಿಂದ ಹಾಗೂ ವಾಣಿಜ್ಯ ಬ್ಯಾಂಕುಗಳಿಂದ ಶೇ.೩ ಬಡ್ಡಿ ದರದಲ್ಲಿ ರೈತರಿಗೆ, ನೇಕಾರರಿಗೆ, ಮೀನುಗಾರರಿಗೆ ಸಾಲ ಸೌಲಭ್ಯ.
 • ದೇಶದಲ್ಲಿ ಮೊದಲ ಬಾರಿಗೆ ಶೇ.೩ರ ಬಡ್ಡಿ ದರದಲ್ಲಿ ರೈತರಿಗೆ ಸಾಲ ವಿತರಣೆ.
 • ೨೦೧೦-೧೧ನೇ ಸಾಲಿನಲ್ಲಿ ೧೪ ಲಕ್ಷ ರೈತರಿಗೆ ೪೦೦೦ ಕೋಟಿ ಸಾಲ ವಿತರಣೆ.
 • ಭೂಚೇತನ ಯೋಜನೆಯಡಿಯಲ್ಲಿ ೧೬ ಜಿಲ್ಲೆಗಳಲ್ಲಿ ೧೨.೭೨ ಲಕ್ಷ ಹೆಕ್ಟೇರ್ ಜಮೀನಿನಲ್ಲಿ ವೈಜ್ಞಾನಿಕ ಬೇಸಾಯ ಪದ್ಧತಿ ಅಳವಡಿಕೆ.
 • ೮೧ ಲಕ್ಷ ರೈತರಿಗೆ ೯೮ ಕೋಟಿ ರೂ. ವೆಚ್ಚದಲ್ಲಿ ೨೧.೭ ಲಕ್ಷ ಕ್ವಿಂಟಾಲ್ ಗುಣಮಟ್ಟದ ಬಿತ್ತನೆ ಬೀಜ ವಿತರಣೆ.
 • ರೈತರಿಗೆ ೧೮೦೦ ಕೋಟಿ ಮೌಲ್ಯದ ೨೩ ಲಕ್ಷ ಟನ್ ರಸಗೊಬ್ಬರ ಸರಬರಾಜು.
 • ೪೩.೬೬೦ ಹೆಕ್ಟೇರ್ ಪ್ರದೇಶದಲ್ಲಿ ಹನಿ ನೀರಾವರಿ ಅಳವಡಿಸಲು ೭ ಸಾವಿರ ರೈತರಿಗೆ ಯಂತ್ರೋಪಕರಣ ಖರೀದಿಸಲು ಸಹಾಯ ಧನ.
 • ರಾಜ್ಯದಲ್ಲಿ ೧೭ ಲಕ್ಷ ನೀರಾವರಿ ಪಂಪ್‌ಸೆಟ್‌ಗಳಿಗಾಗಿ ಎಸ್‌ಕಾಂ ಕಂಪನಿಗಳಿಗೆ ೩೫೭೬ ಕೋಟಿ ಸಹಾಯ ಧನ.
 • ರಾಜ್ಯದಲ್ಲಿ ೧೯.೨೯ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ೧೪೯.೯೩ ಲಕ್ಷ ಟನ್ ತೋಟಗಾರಿಕೆ ಬೆಳೆಗಳ ಉತ್ಪಾದನೆ.
 • ಶೃಂಗೇರಿಯಲ್ಲಿ ಸ್ಥಾಪಿಸಿರುವ ಅಡಿಕೆ ಸಂಶೋಧನ ಕೇಂದ್ರಕ್ಕೆ ೨.೮ ಕೋಟಿ ರೂ. ನೀಡಿಕೆ.
 • ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ೪೦೦ ಕೋಟಿ ರೂ. ವೆಚ್ಚದಲ್ಲಿ ಮೆಗಾ ಮಾರುಕಟ್ಟೆ ಪ್ರಾರಂಭ.

Leave a Reply