ಕರ್ನಾಟಕ ಬಜೆಟ್ 2010-2011

ಕರ್ನಾಟಕ ಬಜೆಟ್ 2010-2011

ಈ ವರ್ಷದ ೨೦೧೦-೨೦೧೧ ನ ರಾಜ್ಯ ಬಜೆಟ್ ಅನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಿದ್ದು, ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್, ಈ ವರ್ಷದಿಂದಲೇ ಪ್ರೌಢ ಶಿಕ್ಷಣ ಕಡ್ಡಾಯ, 126 ತಾಲೂಕುಗಳಲ್ಲಿ ನಿರಂತರ ಜ್ಯೋತಿ ಯೋಜನೆ, ಆಕಸ್ಮಿಕ ಮರಣ ಹೊಂದಿದ ರೈತರಿಗೆ 1 ಲಕ್ಷ ರೂ.ಪರಿಹಾರ, ಗ್ರಾಮೀಣ ಬಾಣಂತಿಯರಿಗೆ 1 ಸಾವಿರ ರೂ.ಪರಿಹಾರ,ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ 2580ಕೋಟಿ, ಪ್ರಸಕ್ತ ಸಾಲಿನಲ್ಲಿ 5ಲಕ್ಷ 35ಸಾವಿರ ಮನೆ ನಿರ್ಮಾಣ, ಮಹಿಳಾ, ಮಕ್ಕಳ ಕಲ್ಯಾಣಕ್ಕೆ 1832ಕೋಟಿ, ಮುಖ್ಯಮಂತ್ರಿ ನಗರೋತ್ತಾನ ಯೋಜನೆಗೆ 600ಕೋಟಿ. ಕೃಷಿ ಚಟುವಟಿಕೆಗಳು, ಆರೋಗ್ಯ ಕ್ಷೇತ್ರಗಳಿಗೆ ಮತ್ತು ಮಹಿಳೆಯರಿಗೆ ಪ್ರೋತ್ಸಾಹಕರವಾಗಿದೆ. ಶ್ರೀ ಸಾಮಾನ್ಯರಿಗೆ ಅನುಕೂಲಕರ ಆಗುವ ಉತ್ತಮ ಬಜೆಟ್ ಇದಾಗಿದ್ದು ಇದರ ಮುಖ್ಯಾಂಶಗಳು ಈ ಕೆಳಗಿನಂತಿವೆ.

ಪ್ರಮುಖ ಅಂಶಗಳು
* ಶೇ.12.5ರಿಂದ ಶೇ.13.5 ವ್ಯಾಟ್ ಏರಿಕೆ
* ಸಕ್ಕರೆ ಮೇಲೆ ಪ್ರವೇಶ ತೆರಿಗೆ ತುಟ್ಟಿ
* ವಿಲಾಸಿ ಹೋಟೆಲ್ ವಾಸ್ತವ್ಯ ಮತ್ತಷ್ಟು ತುಟ್ಟಿ
* ಕಾಗಿನೆಲೆ , ಆದಿಚುಂಚನಗಿರಿ 5 ಕೋಟಿ, ರಂಭಾಪುರಿ 3 ಕೋಟಿ ಕ್ಷೇತ್ರಗಳಿಗೆ ಕೋಟಿ ಕೋಟಿ ನೆರವು
* ಈ ವರ್ಷದಿಂದಲೇ ಪ್ರೌಢ ಶಿಕ್ಷಣ ಕಡ್ಡಾಯ
* ವಾಹನ ಮಾರಾಟ ತೆರಿಗೆ ಶೇ.10ರಿಂದ ಶೇ.11ಕ್ಕೆ ಏರಿಕೆ
* ಮಹಿಳಾ, ಮಕ್ಕಳ ಕಲ್ಯಾಣಕ್ಕೆ 1832 ಕೋಟಿ
* ಗ್ರಾಮೀಣಾಭಿವೃದ್ಧಿಗೆ 3442 ಕೋಟಿ
* ಕೃಷಿ ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್
* ನೆರೆ ಹಾವಳಿಗೆ 1457 ಕೋಟಿ ಕೇಂದ್ರದ ನೆರವು
* ನೆರೆ: 350 ಗ್ರಾಮಗಳ ಶಾಶ್ವತ ಸ್ಥಳಾಂತರ

* 126 ತಾಲೂಕುಗಳಲ್ಲಿ ನಿರಂತರ ಜ್ಯೋತಿ ಯೋಜನೆ
* 487 ಪಶು ವೈದ್ಯ ಹುದ್ದೆಗಳಿಗೆ ನೇಮಕಾತಿ
* ಆಕಸ್ಮಿಕ ಮರಣ ಹೊಂದಿದ ರೈತರಿಗೆ 1 ಲಕ್ಷ ರೂ. ಪರಿಹಾರ
* ಬಳ್ಳಾರಿ, ಬೆಂಗಳೂರು, ಮೈಸೂರು ಆಯುರ್ವೇದ ಆಸ್ಪತ್ರೆಗಳ ಉನ್ನತೀಕರಣಕ್ಕೆ 5 ಕೋಟಿ ರೂ.
* ಗ್ರಾಮೀಣ ಪ್ರದೇಶದ ಆರೋಗ್ಯ ಕೇಂದ್ರಗಳ ಉನ್ನತೀಕರಣ 100 ಕೋಟಿ
* ಗ್ರಾಮೀಣ ಪ್ರದೇಶದ ಗರ್ಭಿಣಿಯರಿಗೆ ಉಚಿತ ಚಿಕಿತ್ಸೆ
* ಗ್ರಾಮೀಣ ಬಾಣಂತಿಯರಿಗೆ 1 ಸಾವಿರ ರೂ.

* ಹಿಂದುಳಿದ ಪ್ರದೇಶಾಭಿವೃದ್ಧಿಗೆ 2580 ಕೋಟಿ
* ಮಲೆನಾಡು ಅಭಿವೃದ್ಧಿ ಮಂಡಳಿಗೆ ತಲಾ 53 ಕೋಟಿ
* ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಗಾಗಿ 300 ಕೋಟಿ
* ಪ್ರಾಥಮಿಕ, ಪ್ರೌಢ ಶಿಕ್ಷಣ ವ್ಯವಸ್ಥೆಗಾಗಿ 8830
* ಉಚಿತ ಬೈಸಿಕಲ್ ನೀಡಲು 200 ಕೋಟಿ
* ಶಾಲೆಗಳ ಕೊಠಡಿ, ಶೌಚಾಲಯ ಅಭಿವೃದ್ಧಿಗೆ 100 ಕೋಟಿ
* ಬೆಂಗಳೂರಿನಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಭಾರತ್ ಆಯುಷ್ ವೈದ್ಯ ವಿಜ್ಞಾನ ಸಂಸ್ಥೆ
* ಮಂಗಳೂರಿನ ಪಿಳಿಕುಳ ಮತ್ತು ಚಿಕ್ಕಬಳ್ಳಾಪುರದಲ್ಲಿ ತಾರಾಲಯ ಸ್ಥಾಪನೆಗೆ 15ಕೋಟಿ ನೆರವು.
*ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾದರೆ 1ಸಾವಿರ ರೂ. ನೆರವು.
*ಪ್ರಸಕ್ತ ಸಾಲಿನಲ್ಲಿ 5ಲಕ್ಷ 35ಸಾವಿರ ಮನೆ ನಿರ್ಮಾಣ.
*ರೇಶ್ಮೆ ಬೆಳೆಗಾರರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ.

* ಮುಖ್ಯಮಂತ್ರಿ ನಗರೋತ್ತಾನ ಯೋಜನೆಗೆ 600ಕೋಟಿ
* ಚಿಕ್ಕಬಳ್ಳಾಪುರದಲ್ಲಿ ಹಾಲು ಸಂಸ್ಕರಣಾ ಘಟಕ
*ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ 2580ಕೋಟಿ
*ಪ್ರಾಥಮಿಕ, ಪ್ರೌಢಶಿಕ್ಷಣ ಅಭಿವೃದ್ದಿಗಾಗಿ 8830ಕೋಟಿ
*ವಿಶ್ವಕನ್ನಡ ಸಮ್ಮೇಳನಕ್ಕೆ 10ಕೋಟಿ
*ನಂದಿಬೆಟ್ಟದಲ್ಲಿ ನೂತನ ತಾರಾಲಯ ನಿರ್ಮಾಣಕ್ಕೆ 1ಕೋಟಿ
*ಪಂಚಾಯ್ತಿಗಳಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲು
*ಶಾಲೆಗಳ ಶೌಚಾಲಯಕ್ಕೆ 100ಕೋಟಿ ರೂ.
*ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ 207ಕೋಟಿ ರೂ.
*ಶಾದಿ ಮಹಲ್ ನಿರ್ಮಾಣಕ್ಕೆ 10ಕೋಟಿ
*ಬೆಂಗಳೂರಿನಲ್ಲಿ ಹಜ್ ಭವನ ನಿರ್ಮಾಣಕ್ಕೆ 5ಕೋಟಿ
*ಗ್ರಾಮಾಂತರ ಪ್ರದೇಶಗಳಲ್ಲಿ ಗರಡಿ ಮನೆ ನಿರ್ಮಾಣಕ್ಕೆ 2ಕೋಟಿ
*ಕಮ್ಮಾರ, ಕುಂಬಾರ, ಅಕ್ಕಸಾಲಿಗರ ಆರ್ಥಿಕ ಚಟುವಟಿಕೆಗಳ ಬೆಂಬಲಕ್ಕೆ 20ಕೋಟಿ
*ಪತ್ರಕರ್ತರಿಗೆ ಮಾಸಾಶನ 1 ರಿಂದ 2 ಸಾವಿರಕ್ಕೆ ಏರಿಕೆ.
*ಬೆಳಗಾವಿಯಲ್ಲಿ ಸುವರ್ಣ ಸೌಧ ನಿರ್ಮಾಣ ಪೂರ್ಣಗೊಳಿಸಲು 150ಕೋಟಿ
*ಯಡಿಯೂರೂ ಸಿದ್ದಲಿಂಗೇಶ್ವರ ಕ್ಷೇತ್ರಕ್ಕೆ 10 ಕೋಟಿ ರುಪಾಯಿ.

ಆಯವ್ಯಯ ಭಾಷಣ Budget Speech
ವಿಹಂಗಮ ನೋಟ Budget at a Glance
ಆಯವ್ಯಯ ಮುಖ್ಯಾಂಶಗಳು Budget Highlights
ಆಯವ್ಯಯ ಪಕ್ಷಿನೋಟ Overview of Budget

Leave a Reply