"I understand that there are accounts opened in Twitter, Facebook etc., in my name. Please note that these are all FAKE and I don't have any such accounts"

Three Years of Bountiful Development

Tuesday, May 31st, 2011

Click here to Download the contents(.doc format) May, 2011 My Dear Fellow Citizens, Our Government has successfully completed three years in office and entered the fourth year today. As assured to the people of the State during assuming the office, we have been giving the progress report of various developmental programmes of our government regularly. [...]

ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ

Saturday, April 16th, 2011

ಕರ್ನಾಟಕ ಗೋ ಹತ್ಯೆ ಮತ್ತು ಸಂರಕ್ಷಣಾ ಕಾಯ್ದೆ – ೨೦೧೦ ಕರ್ನಾಟಕ ಹಿಂದೂ ಧಾರ್ಮಿಕ ದತ್ತಿ ಮಸೂದೆ – ೨೦೧೧ ಕರ್ನಾಟಕ ಸಂಸ್ಕೃತಿ ಸಂರಕ್ಷಣಾ ಯೋಜನೆ ಸಂಸ್ಕೃತ ವಿಶ್ವವಿದ್ಯಾನಿಲಯ ಸ್ಥಾಪನೆ. ದೇವಸ್ಥಾನ ಅರ್ಚಕರಿಗೆ ಸಂಭಾವನೆ ಹೆಚ್ಚಳ. ಶಿವರಾತ್ರಿ ವೇಳೆಯಲ್ಲಿ ಪವಿತ್ರ ಗಂಗಾಜಲವನ್ನು ಹಂಚುವ ಕಾರ್ಯ. ಅನುದಾನಗಳು ೨೦೧೦-೧೧ (ಹಿಂದೂ ಧಾರ್ಮಿಕ ಸಂಸ್ಥೆಗಳು) ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರಕ್ಕೆ ರೂ. ೧೦ ಕೋಟಿ ಶ್ರವಣಬೆಳಗೊಳ ಬಾಹುಬಲಿ ದೇವಸ್ಥಾನ ಸಂಕೀರ್ಣಕ್ಕೆ ರೂ. ೫ ಕೋಟಿ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರಕ್ಕೆ ರೂ. ೫ [...]

ಆಸರೆ ಯೋಜನೆಯಡಿ ಮನೆಗಳ ಹಂಚಿಕೆ

Saturday, April 16th, 2011

ಕರ್ನಾಟಕ ರಾಜ್ಯದಲ್ಲಿ ಈ ಹಿಂದೆಂದೂ ನಡೆಯದ ಭೀಕರ ನೆರೆ ಹಾವಳಿಗೆ ಸಿಲುಕಿ ಸಂಕಷ್ಟದಲ್ಲಿದ್ದ ಸಂತ್ರಸ್ತರ ನೆರವಿಗಾಗಿ ಆಸರೆ ಯೋಜನೆಯಡಿ ಮನೆಗಳನ್ನು ಸರ್ಕಾರಿ ಹಾಗೂ ಖಾಸಗೀ ಸಹಭಾಗಿತ್ವದಲ್ಲಿ ಕಟ್ಟಿಕೊಡುವ ಯೋಜನೆಯನ್ನು ರೂಪಿಸಿ, ಕೇಂದ್ರ ಗೃಹ ಮಂತ್ರಿ ಶ್ರೀ ಪಿ. ಚಿದಂಬರಂ ರವರು ೩ ವರ್ಷಗಳಲ್ಲಿ ಆಗದ ಕೆಲಸ ಎಂದು ಅಭಿಪ್ರಾಯ ಪಟ್ಟಿದ್ದನ್ನು, ಕೇವಲ ಒಂದು ವರ್ಷದ ಅವಧಿಯಲ್ಲಿ ಕಟ್ಟಿಸಿ ನೆರೆ ಸಂತ್ರಸ್ತರಿಗೆ ಹಂಚಲಾಗಿದೆ. ಇದೊಂದು ದಾಖಲೆ.

ಗಣಿ ಅದಿರು ರಫ್ತು ನಿಷೇದ

Saturday, April 16th, 2011

ಗಣಿ ಅದಿರು ರಫ್ತಿನ ವಿಷಯದಲ್ಲಿ ನಡೆಯುತ್ತಿರುವ ಅವ್ಯವಹಾರಗಳನ್ನು ಮನಗಂಡು, ರಾಜ್ಯ ನೈಸರ್ಗಿಕ ಸಂಪತ್ತನ್ನು ಕಾಪಾಡುವ ದೃಷ್ಟಿಯಿಂದ ಗಣಿ ಅದಿರು ರಫ್ತು ನಿಷೇದ ಮಾಡಿರುವಲ್ಲಿ ರಾಷ್ಟ್ರದಲ್ಲಿಯೇ ಕರ್ನಾಟಕವು ಪ್ರಥಮ ರಾಜ್ಯವಾಗಿರುತ್ತದೆ. ಈ ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ಬಿ.ಜೆ.ಪಿ. ಸರ್ಕಾರ ಧೀರೋದ್ದಾತ್ತ ಹೆಜ್ಜೆಯನ್ನು ಮುಂದಿಟ್ಟಿರುತ್ತದೆ.

ವಿಶ್ವ ಕನ್ನಡ ಸಮ್ಮೇಳನ

Saturday, April 16th, 2011

ರಾಜ್ಯದಲ್ಲಿ ೨೫ ವರ್ಷಗಳ ನಂತರ ಕರ್ನಾಟಕ ಗಡಿ ಜಿಲ್ಲೆಯಾದ ಬೆಳಗಾವಿಯಲ್ಲಿ ಪ್ರಥಮ ಬಾರಿಗೆ ಅತ್ಯಂತ ಯಶಸ್ವಿಯಾಗಿ, ಅದ್ದೂರಿಯಾಗಿ ವಿಶ್ವ ಕನ್ನಡ ಸಮ್ಮೇಳನವನ್ನು ಯಾವುದೇ ಅಡೆತಡೆಗಳಿಲ್ಲದೆ ನಡೆಸಲಾಯಿತು. ಈ ಸಮ್ಮೇಳನಕ್ಕೆ ಕೋಟ್ಯಾಂತರ ಸಂಖ್ಯೆಯಲ್ಲಿ ಕನ್ನಡಿಗರು ಭಾಗವಹಿಸಿದ್ದು, ಅತ್ಯಂತ ಯಶಸ್ವಿಯಾಗಿರುತ್ತದೆ. ಈ ವಿಶ್ವ ಕನ್ನಡ ಸಮ್ಮೇಳನ ಬೆಳಗಾವಿಯಲ್ಲಿ ನಡೆಸಿರುವುದರಿಂದ ವಿಶ್ವ ಕನ್ನಡಿಗರನ್ನು ಒಗ್ಗೂಡಿಸುವ ಜೊತೆಯಲ್ಲಿ ಅಲ್ಲಿ ಮೇಲಿಂದ ಮೇಲೆ ತಲೆದೋರುತ್ತಿದ್ದ ಕರ್ನಾಟಕ ಮಹಾರಷ್ಟ್ರ ಗಡಿ ಸಮಸ್ಯೆಗೆ ಪರಿಹಾರವನ್ನು ಕಲ್ಪಿಸುವಂತಾಗಿದೆ.

ಚುನಾವಣೆಗಳು

Saturday, April 16th, 2011

ಕರ್ನಾಟಕ ರಾಜ್ಯದಲ್ಲಿ ಮೂರು ವರ್ಷಗಳ ಅವಧಿಯಲ್ಲಿ ನಡೆದಂತಹ ಎಲ್ಲಾ ಚುನಾವಣೆಗಳಲ್ಲಿ ಬಿ.ಜೆ.ಪಿ. ಪಕ್ಷವು ಯಶಸ್ವಿಯಾಗಿ ವಿರೋಧ ಪಕ್ಷಗಳನ್ನು ಮೂಲೆಗುಂಪು ಮಾಡಿ ಆಯ್ಕೆಯಾಗಿರುತ್ತದೆ. ಗ್ರಾಮ ಪಂಚಾಯತಿ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗಳಲ್ಲಿ ಬಿ.ಜೆ.ಪಿ. ಪಕ್ಷದ ಅಭ್ಯರ್ಥಿಗಳು ಹಿಂದೆಂದಿಗಿಂತಲೂ ಹೆಚ್ಚು ಮತಗಳ ಅಂತರದಿಂದ ಗೆದ್ದು ಬಂದಿರುತ್ತಾರೆ. ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ / ವಿಧಾನಸಭೆಯ ಉಪ ಚುನಾವಣೆಯಲ್ಲೂ ಬಿ.ಜೆ.ಪಿ. ಪಕ್ಷವು ತನ್ನ ಮೇಲುಗೈಯನ್ನು ಸಾಧಿಸಿದೆ. ಇದುವರೆಗೆ ರಾಜ್ಯದಲ್ಲಿ ೧೬ ಉಪಚುನಾವಣೆಗಳು ನಡೆದಿದ್ದು, ಹೆಚ್ಚು ಮತಗಳನ್ನು ಪಡೆದು ಅದರಲ್ಲಿಯೂ ತನ್ನ [...]

ಕಾನೂನು ಮತ್ತು ಸುವ್ಯವಸ್ಥೆ

Saturday, April 16th, 2011

ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಯಾವುದೇ ರೀತಿಯ ಆತಂಕಕಾರಿ  ಮತ್ತು ಅವ್ಯವಸ್ಥೆಯ ಪರಿಸ್ಥಿತಿಯು ನಿರ್ಮಾಣವಾಗಲು ಅವಕಾಶವಾಗಿರುವುದಿಲ್ಲ. ಕರ್ನಾಟಕ ರಾಜ್ಯವು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಪ್ರಥಮ ರಾಜ್ಯವಾಗಿದೆಯೆಂದು ರಾಷ್ಟ್ರಮಟ್ಟದಲ್ಲಿ ಹಗ್ಗಳಿಕೆಯನ್ನು ಗಳಿಸಿದೆ.

ಇತರೆ ಜನೋಪಯೋಗಿ ಕಾರ್ಯಕ್ರಮಗಳು

Saturday, April 16th, 2011

ಬಡತನ ಮತ್ತಿತರ ಕಾರಣಗಳಿಂದ ಲಿಂಗ ತಾರತಮ್ಯ ಮತ್ತು ಶಿಶುಹತ್ಯೆ (ಭ್ರೂಣ ಹತ್ಯೆ) ಯಿಂದ ದೇಶದ ಲಿಂಗಾನುಪಾತದಲ್ಲಿ ತೀವ್ರ ವ್ಯತ್ಯಾಸವಾಗಿದ್ದು ಹೆಣ್ಣು ಮಕ್ಕಳು ಜನಿಸಿದಾಗ ನೈತಿಕ ಸ್ಥೈರ್ಯ ತುಂಬಲು ‘ಭಾಗ್ಯಲಕ್ಷ್ಮಿ’ ಯೋಜನೆ ಜಾರಿಗೊಳಿಸಿದ್ದು, ಈ ಯೋಜನೆಯಡಿ ಹೆಣ್ಣುಮಕ್ಕಳು ಕನಿಷ್ಟ ೧೦ನೇ ತರಗತಿವರೆಗೆ ಓದಲು ಅನುಕೂಲವಾಗುವ ಕ್ರಮ, ಠೇವಣಿ ಹಣ ೧ ಲಕ್ಷ ರೂ.ಗಳಿಗೆ ಏರಿಕೆ, ಸೈಕಲ್ ನೀಡಿಕೆ.

೨ ಬಾರಿ ಯಶಸ್ವಿ ಜಾಗತಿಕ ಬಂಡವಾಳ ಹೂಡಿಕೆಗೆ ಬೃಹತ್ ಸಮಾವೇಶ

Saturday, April 16th, 2011

ಕೈಗಾರಿಕೆಗಳ ಸರ್ವಾಂಗೀಣ ಅಭಿವೃದ್ದಿಗೆ ಮತ್ತು ಐ.ಟಿ. ಮತ್ತು ಬಿ.ಟಿ. ಉತ್ತೇಜನಕ್ಕಾಗಿ ಲಕ್ಷಾಂತರ ಕೋಟಿ ರೂ.ಗಳ ಜಾಗತಿಕ ಬಂಡವಾಳ ಹೂಡಿಕೆಗೆ ಯಶಸ್ವಿ ಕಾರ್ಯಾಚರಣೆ. ೩.೯೩ ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿಕೆ. ೩೮೯ ಕೈಗಾರಿಕಾ ಯೋಜನೆಗಳ ಒಪ್ಪಂದ ೧೦ ಲಕ್ಷ ಹೊಸ ಉದ್ಯೋಗದ ನಿರೀಕ್ಷೆ ೨೫೦ ಕೋಟಿಗೂ ಹೆಚ್ಚು ಬಂಡವಾಳ ಹೂಡಿಕೆಯ ೧೧೩ ಬೃಹತ್ ಯೋಜನೆಗಳಿಗೆ ಅನುಮೋದನೆ. ಇಲ್ಲಿಯವರೆಗೆ ಒಟ್ಟು ೧೬೬೬ಯೋಜನೆಗಳಿಗೆ ಅನುಮೋದನೆ ಹಾಗೂ ಸುಮಾರು ೧೫.೧೯ ಲಕ್ಷ ಮಂದಿಗೆ ಉದ್ಯೋಗಾವಕಾಶ ದೊರಕಲಿದೆ. ಕೈಗಾರಿಕಾ ರಂಗ ಉತ್ತೇಜನಕ್ಕಾಗಿ ಉದ್ದಿಮೆದಾರರುಗಳ [...]

ವಸತಿ, ನೆರೆ ಪರಿಹಾರ ಮತ್ತು ಅಭಿವೃದ್ದಿ ಕಾರ್ಯಗಳು

Saturday, April 16th, 2011

೨೦ ಅಂಶಗಳ ಕಾರ್ಯಕ್ರಮ ಅನುಷ್ಟಾನ. ೨೦೦೯ರಲ್ಲಿ ೭ರ ಸ್ಥಾನವಿದ್ದು, ೨೦೧೦ರಲ್ಲಿ ೨ನೇ ಸ್ಥಾನಕ್ಕೆ ತಲುಪಿದೆ. ರಾಜ್ಯದ ಸಾಧನೆ ಶೇ.೯೦ ರಷ್ಟಾಗಿದೆ ಆಸರೆ ಯೋಜನೆಯಡಿ ೬೨೩೨೪ ಮನೆಗಳ ನಿರ್ಮಾಣ. ಅಷ್ಟೇ ಮನೆಗಳ ಕಟ್ಟಡ ನಿರ್ಮಾಣ ಪ್ರಾರಂಭ. ೨೭೦ ಪೂರ್ಣಗೊಂಡ ಬಡಾವಣೆಗಳು. ೪೪೪ ಗ್ರಾಮಗಳ ಸ್ಥಳಾಂತರ ಇತ್ಯಾದಿ. ವಾಜಪೇಯಿ ನಗರ ನಿವೇಶನ ಯೋಜನೆಯಡಿ ೫೦,೦೦೦ ನಿವೇಶನಗಳ ಹಂಚಿಕೆಯ ಗುರಿ. ಆಶ್ರಯ ಗ್ರಾಮೀಣ ನಿವೇಶನ ಯೋಜನೆಯಡಿಯಲ್ಲಿ ೨೦೧೦-೧೧ನೇ ಸಾಲಿನಲ್ಲಿ ೨ ಲಕ್ಷ ನಿವೇಶನಗಳ ಹಂಚಿಕೆ ಗುರಿ. ಮುಂದಿನ ವರ್ಷಗಳಲ್ಲಿ ರಾಜ್ಯದಲ್ಲಿ ಗುಡಿಸಲು [...]

ಕಾರ್ಮಿಕ ಇಲಾಖೆ

Saturday, April 16th, 2011

೨೦೧೦ ಜೂನ್ ನಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಜಾಗತಿಕ ಬಂಡವಾಳದಿಂದ ೩.೯೩ ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ೩೮೯ ಕೈಗಾರಿಕಾ ಯೋಜನೆಗಳಿಗೆ ಒಪ್ಪಂದ ಸುಮಾರು ೧೦ ಲಕ್ಷ ಹೊಸ ಉದ್ಯೋಗದ ನಿರೀಕ್ಷೆ. ೨೫೦ ಕೋಟಿ ಹೆಚ್ಚು ಬಂಡವಾಳ ಹೂಡಿಕೆಯ ೧೧೩ ಬೃಹತ್ ಯೋಜನೆಗಳಿಗೆ ಅನುಮೋದನೆ. ಅಸಂಘಟಿತ ಕಾರ್ಮಿಕರಿಗೆ ಪಿಂಚಣಿಯನ್ನು ಪ್ರತಿ ವರ್ಷ ೧೨೦೦ ರೂ.ನಂತೆ ೩ ವರ್ಷ ನೀಡಿಕೆ ಮತ್ತು ಸ್ಮಾರ್ಟ್ ಕಾರ್ಡ್ ವಿತರಣೆ. ಗಾರ್ಮೆಂಟ್ಸ್ ಕಲ್ಯಾಣಕ್ಕಾಗಿ ಮತ್ತು ಸೇವಾ ಭದ್ರತೆಗೆ ಸರ್ಕಾರದ ಕ್ರಮ. [...]

ವೈದ್ಯಕೀಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ

Saturday, April 16th, 2011

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣದ ಯೋಜನೆ. ಸರ್ಕಾರಿ ಕೋಟಾದ ಖಾಸಗೀ ವೈದ್ಯಕೀಯ ಕಾಲೇಜಿನಲ್ಲಿ ಅಲ್ಪಸಂಖ್ಯಾತರಿಗೆ ಸ್ನಾತಕ ಪದವಿ ಸೀಟುಗಳನ್ನು ಶೇಎ.೪೦ ರಿಂದ ೪೨ಕ್ಕೆ ಹಾಗೂ ಅಲ್ಪ ಸಂಖ್ಯಾತರ ಕಾಲೇಜುಗಳಲ್ಲಿ ಶೇ.೨೫ ರಿಂದ ೨೭ಕ್ಕೆ ಹೆಚ್ಚಳ. ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸ್ನಾತಕೋತ್ತರ ಸೀಟುಗಳನ್ನು ೨೯೮ ರಿಂದ ೫೦೫ಕ್ಕೆ ಹಾಗೂ ಸರ್ಕಾರಿ ಸ್ವಾಯತ್ತ ಸಂಸ್ಥೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ೧೧ ರಿಂದ ೩೧ಕ್ಕೆ ಹೆಚ್ಚಳ. ಆರೋಗ್ಯ ಕವಚ ೧೦೮ರ ಅನುಷ್ಠಾನದ ಅಡಿಯಲ್ಲಿ ತುರ್ತು ಸಂದರ್ಭಗಳಲ್ಲಿ ಹಾಗೂ ಅಪಘಾತ, ಹೆರಿಗೆ ನೋವು [...]