15.09.2009 / 12.00 pm / Infosys Campus, Mysore.
==========================================================
ಅಖಿಲ ಭಾರತ ಕಾಂಗ್ರೆಸ್ ಸಮಿತಿ ಹಾಗೂ ಯು.ಪಿ.ಎ. ಅಧ್ಯಕ್ಷರಾದ ಶ್ರೀಮತಿ ಸೋನಿಯಾಗಾಂಧಿ ಅವರೆ,
ವಿರೋಧಪಕ್ಷದ ನಾಯಕರಾದ ಶ್ರೀ ಸಿದ್ಧರಾಮಯ್ಯ ನವರೆ,
ಇನ್‌ಫೋಸಿಸ್‌ನ ಅಧ್ಯಕ್ಷರಾದ ಶ್ರೀ ಎನ್.ಆರ್. ನಾರಾಯಣಮೂರ್ತಿ ಅವರೆ,
ಶ್ರೀ ಕ್ರಿಸ್ ಗೋಪಾಲಕೃಷ್ಣರವರೆ,
ಗಣ್ಯರೆ, ಇನ್‌ಫೋಸಿಸ್‌ನ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರೆ,
ಮಾಧ್ಯಮದ ಸ್ನೇಹಿತರೆ, ಆತ್ಮೀಯರೆ,
ನಾಡಹಬ್ಬ ದಸರಾದಿಂದಾಗಿ ಜಾಗತಿಕ ಮನ್ನಣೆ ಪಡೆದಿರುವ ಮೈಸೂರಿನಲ್ಲಿ, ಅದೇ ರೀತಿಯ ಮನ್ನಣೆಯನ್ನು ಪಡೆದಿರುವ ಇನ್‌ಫೋಸಿಸ್ ಸಂಸ್ಥೆಯ ಜಾಗತಿಕ ಶಿಕ್ಷಣ ಕೇಂದ್ರದ ಎರಡನೆ ಘಟಕವನ್ನು ಉದ್ಘಾಟಿಸುವ ಈ ಸಂದರ್ಭದಲ್ಲಿ ಅತ್ಯಂತ [...]